ದಿನದ ಸುದ್ದಿ

ಡಿ.21ರಂದು ಉದ್ಯೋಗ ಮೇಳ

Published

on

ಸುದ್ದಿದಿನ,ಮಂಡ್ಯ : ಕಳೆದ ಬಾರಿ ನಡೆದ ಎರಡು ಉದ್ಯೋಗ ಮೇಳವು ಬಹಳ ಯಶಸ್ವಿಯಾಗಿ ನಡೆಯುವುದರ ಮೂಲಕ 700 ಕುಟುಂಬಗಳಿಗೆ ದಾರಿ ದೀಪವಾಗಿದೆ. ಅದರಂತೆ ಈ ಬಾರಿ ಆಯೋಜಿಸಲಿರುವ ಉದ್ಯೋಗ ಮೇಳದಲ್ಲಿ ಕನಿಷ್ಠ 2 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಮತ್ತು ನಗರಸಭೆ ಮಂಡ್ಯ ಇವರ ವತಿಯಿಂದ ಡಿಸೆಂಬರ್ 21 ರಂದು ನಗರದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ) ಮಂಡ್ಯ ಇಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಾರ್ಯಲಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಂಡ್ಯ, ಮೈಸೂರು, ಬಿಡದಿ, ರಾಮನಗರ, ಹಾಸನ, ಶ್ರೀರಂಗಪಟ್ಟಣ ಮತ್ತು ಬೆಂಗಳೂರು ಸೇರಿದಂತೆ ಇನ್ನಿತರ ಪ್ರದೇಶಗಳಿಂದ ಹೆಚ್ಚು ಕಂಪನಿಗಳನ್ನು ಕರೆತನ್ನಿ. ಈ ಮೂಲಕ ಯುವಕರು, ನಿರುದ್ಯೋಗಿಗಳು, ಮಹಿಳೆಯರು ಮತ್ತು ಅಂಗವಿಕಲರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಒಂದು ವೇದಿಕೆಯನ್ನು ನಿರ್ಮಿಸೋಣ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಉದ್ಯೋಗಾಧಿಕಾರಿ ಕೆ.ಶಿವಮೂರ್ತಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಉದ್ಯೋಗ ಮೇಳದಲ್ಲಿ ಜೆ.ಕೆ ಟೈರ್ಸ್, ರಾಣಿ ಮದ್ರಾಸ್, ಗಿಲ್‍ವುಡ್, ಗೋಕುಲ್‍ದಾಸ್, ಶಾಹಿ ಗ್ರೂಪ್ಸ್, ಅಕ್ವೇರಲ್ ಪ್ರೈ.ಲಿ, ಗಿರೀಶ್ ಎಕ್ಸಪೋರ್ಟ್, ಚೋಳ ಪೀಪಲ್ ಅಂಡ್ ಮಾರ್ಕೆಟಿಂಗ್ ಸರ್ವಿಸಸ್, ಇಕ್ವಿಟಾಸ್ ಸ್ಮಾಲ್ ಪೈನಾನ್ಸ್, ಹೆಚ್.ಡಿ.ಬಿ ಪೈನಾನ್ಸ್, ಲೈಟ್ನಿಂಗ್, ವಿಧಾತ್ರ್ರಿ ಮೋಟರ್ಸ್ ಅರಸ್ ಟಾಟಾ ಮೋಟರ್ಸ್, ಅಪೋಲೊಹೋಮ್ ಹೆಲ್ತ್‍ಕೇರ್ ಲಿಮಿಟೆಡ್, ಉಬರ್ .

ವುಡ್ ಲ್ಯಾಂಡ್, ಹಿಂದುಜಾ ಗ್ಲೋಬಲ್ ಸಲ್ಯೂಷನ್ಸ್, ಟ್ರುವಿಷನ್, ದಿಶಾ ಮೆನೆಜ್‍ಮೆಂಟ್, ರುಡ್‍ರೆಡ್, ಹೆಚ್.ಡಿ.ಎಫ್.ಸಿ, ಜಸ್ಟ್ ಡಯಲ್, ಎಮ್ಸ್, ಎಸ್.ಬಿ.ಐ ಲೈಪ್ ಇನ್‍ಶೂರೆನ್ಸ್, ಜಿ4ಎಸ್, ಯುರೇಖಾಫೋಬ್ಸ್, ನವಭಾರತ್‍ಫರ್ಟಿಲೈಸರ್ಸ್, ಫ್ರೆಂಡ್ಲಿಮೋಟಾರ್ಸ್, ಬಿ.ಎಸ್.ಎಲ್, ಪಿಎಂಕೆಕೆ, ಜೆಟ್‍ಕಿಂಗ್(ರಾಜಾಜಿನಗರ), ಕುಂಬಿಟೆಕ್ನಾಲಜಿ, ಹೆಚ್‍ಜಿಎಸ್.

ಸಮರ್ಥನಂ(ವಿಕಲಚೇತನರಿಗಾಗಿ)ಶಬರಿಗ್ರೂಪ್ಸ್, ಸುರಭಿ ಪ್ಲಾನೆಟೆಕ್ಸ್, ಅರಸ್‍ಕಾರ್ಸ್‍ಸರ್ವೀಸ್ ಸೆಂಟರ್ ಪ್ರೈ ಯಂಗ್ ಇಂಡಿಯಾ ಪ್ರೈ.ಲಿ ಮೈಸೂರು ಲಿ.,ಬಿ.ಬಿ.ಮೋಟರ್ಸ್, ಸಿಪೆಟ್, ಸಾತಿಯ, ಯಂಗ್ ಇಂಡಿಯ,ಬಿ.ಬಿ ಮೋಟರ್ಸ್,ಸಿಪೆಟ್, ಸಾತಿಯ ಹಾಗೂ ಇನ್ನಿತರ 50 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದೆ.

ಕಂಪನಿಯವರು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ, ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ಪ್ರಮಾಣ ಪತ್ರಗಳು, ಸ್ವ ವಿವರ (ಖesume) ಪತ್ರ, 2 ಭಾವ ಚಿತ್ರಗಳು ಹಾಗು ವಿದ್ಯಾರ್ಹತೆಯ ಪ್ರಮಾಣ ಪತ್ರಗಳ ಜೆರಾಕ್ಸ್ ಮತ್ತು ಆಧಾರ್ ಕಾರ್ಡ್ ಪ್ರತಿಯ ಜೊತೆಗೆ ಭಾಗವಹಿಸಬಹುದಾಗಿದೆ.

ಕನಿಷ್ಠ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ,ಬಿಎಸ್ಸಿ(ನರ್ಸಿಂಗ್),ಬಿ.ಇ., ಮತ್ತು ಚಾಲಕರ ಹುದ್ದೆಗಳಿಗೆ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 08232-220126 ಹಾಗೂ 9986263695 ಗೆ ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version