ದಿನದ ಸುದ್ದಿ

ಅಗ್ನಿಶಾಮಕ ವಿವಿಧ ವೃಂದಗಳ 1567 ಹುದ್ದೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ವಿವಿಧ ವೃಂಧಗಳ ಅಗ್ನಿಶಾಮಕ ಸಿಬ್ಬಂದಿಯ 1567 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

32 ಅಗ್ನಿಶಾಮಕ ಠಾಣಾಧಿಕಾರಿಗಳ ಹುದ್ದೆಗಳು, ಅಗ್ನಿಶಾಮಕ ಚಾಲಕರ 227 ಹುದ್ದೆಗಳು ಹಾಗೂ ಚಾಲಕ ತಂತ್ರಜ್ಞರ 82 ಹುದ್ದೆಗಳು ಹಾಗೂ ಅಗ್ನಿಶಾಮಕರ 122 ಹುದ್ದೆಗಳಿಗೆ ಈ ನೇಮಕಾತಿ ಒಳಗೊಂಡಿದೆ.

ಅಂರ್ತಜಾಲ ತಾಣ www.ksp.gov.in
ಲಾಗ್‍ಇನ್ ಆಗಿ ಜೂನ್ 22 ರಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸಲು ಜುಲೈ 20 ಕೊನೆಯ ದಿನಾಂಕವಾಗಿರುತ್ತದೆ.

ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೆ ಸೇರ್ಪಡೆಯಾಗಿ ಅಮೂಲ್ಯ ಜೀವಗಳನ್ನು ರಕ್ಷಿಸಲು ಇದೊಂದು ಸದಾವಕಾಶವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version