ದಿನದ ಸುದ್ದಿ
ಟೆಕ್ಕಿ ಶವಕ್ಕಾಗಿ ಕಾದಿರುವ ಕುಟುಂಬ ವರ್ಗ
ಸುದ್ದಿದಿನ: ಉದ್ಯೋಗ ಅಭದ್ರತೆ ಖಿನ್ನತೆಯಿಂದ ನೆದರದಲೆಂಡ್ ನ ಯುಟ್ರಿನ್ ನಗರದ ತಮ್ಮ ಮನೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಚನ್ನಪಟ್ಟಣ ಮೂಲದ ಟೆಕ್ಕಿ ಶಿವ ಪ್ರಸಾದ್ ಶವವನ್ನು ತವರಿಗೆ ತರಿಸಿಕೊಳ್ಳಲು ಕುಟುಂಬ ವರ್ಗ ಇನ್ನಿಲ್ಲದ ಯತ್ನ ನಡೆಸುತ್ತಿದೆ.
ಈ ಮಧ್ಯೆ ಬೆಂಗಳೂರಿನಲ್ಲಿರುವ ಕುಟುಂಬವು ಮುಖ್ಯಮಂತ್ರಿ ಕಚೇರಿಗೆ ಮಂಗಳವಾರ ಭೇಟಿಮಾಡಿ ಅಲ್ಲಿನ ಅನಿವಾಸಿ ಭಾರತೀಯರ ವಿಭಾಗದ ಮೂಲಕ ನೆದರ್ಲೆಂಡ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಗೆ ಸಂಪರ್ಕಿಸಲು ಕೋರಿದರು. ಪಾಸ್ ಪೋರ್ಟ್ ವಿವರ ಮಾಹಿತಿಗಳನ್ನು ಕುಟುಂಬದವರಿಂದ ಪಡೆದು ಇ ಮೇಲ್ ಮಾಡಲಾಗಿದೆ. ನಂತರ ದಿಲ್ಲಿಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಹಾಯವಾಣಿಗೂ ಕರೆ ಮಾಡಿ ವಿಷಯ ಮುಟ್ಟಿಸಲಾಗಿದೆ.
ಉದ್ಯೋಗ ಭದ್ರತೆ; ಚನ್ನಪಟ್ಟಣದ ಟೆಕ್ಕಿ ಆತ್ಮಹತ್ಯೆ
ಬೆಂಗಳೂರಿನ ನಾಗಶೆಟ್ಟಹಳ್ಳಿಯಲ್ಲಿರುವ ಶಿವಪ್ರಸಾದ್ ಅವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ದೂರದ ಊರಿಗಳಲ್ಲಿದ್ದ ಅವರ ಸಂಬಂಧಿಗಳು ಬಂದಿದ್ದು, ಶವ ಬರುವಿಕೆಗಾಗಿ ಕಾಯುತ್ತಿದ್ದಾರೆ.
ಈ ಮಧ್ಯೆಶಿವಪ್ರಸಾದ್ ಅವರಸಹೋದ್ಯೋಗಿ ಶಿವಾನಂದ್ ಅವರು ಕುಟುಂಬವನ್ನು ಸಂಪರ್ಕಿಸಿದ್ದು ಆಸ್ಪತ್ರೆಯೊಳಗೆ ತಮ್ಮನ್ನು ಬಿಡುತ್ತಿಲ್ಲ , ಭಾರತೀಯ ರಾಯಭಾರಿ ಕಚೇರಿ ಜತೆ ನಿರಂತರ ಸಂಪರ್ಕದಲ್ಲಿದ್ದು, ಆದಷ್ಟು ಬೇಗ ಪ್ರಕ್ರಿಯೆ ಮುಗಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜಧಾನಿ ಆ್ಯಮ್‌ಸ್ಟರ್‌ಡ್ಯಾಂನಿಂದ 16 ಕಿ.ಮೀ ದೂರದಲ್ಲಿರುವ ಯುತ್ರೂನ್ ನಗರದಲ್ಲಿ ವಾಸವಿದ್ದ ಶಿವಪ್ರಯಾದ್ ತಾವು ವಾಸವಿದ್ದ ಮನೆಯ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಅವರು ನೆದರ್ಲೆಂಡ್‌ನ ಲಿಬರ್ಟಿ ಗ್ಲೋಬಲ್ ಎಂಬ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.
ತಮ್ಮ ಗುತ್ತಿಗೆ ಅವಧಿ ಮುಗಿದಿದ್ದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ನೆದರ್ಲೆಂಡ್‌ನಲ್ಲಿ ಹಲವು ಕಂಪನಿಗಳು ಉದ್ಯೋಗಿಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುತ್ತವೆ. ಅದೇ ರೀತಿ ಶಿವಪ್ರಸಾದ್ ಅವರೂ ಕೆಲಸ ಮಾಡುತ್ತಿದ್ದರು. ಇನ್ನೇನು ಅವರ ಕೆಲಸದ ಅವಧಿ ಮುಗಿಯುವುದರಲ್ಲಿತ್ತು. ಮುಂದೇನು ಮಾಡುವುದು ಎಂದು ಅವರು ಸದಾ ಯೋಚಿಸುತ್ತಿದ್ದರು. ಆದರೆ ಇಂಥ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಅವರ ಸಹೋದ್ಯೋಗಿ ಕರ್ನಾಟಕ ಮೂಲದ ಶಿವಾನಂದ್ ಎಂಬುವವರುತಿಳಿಸಿದ್ದಾರೆ.
ಶಿವಪ್ರಸಾದ್ ಅವರಿಗೆ ಮದುವೆಯಾಗಿ ಒಂದು ಮಗುವಿದೆ. ತಿಂಗಳಿನಿಂದ ಇಲ್ಲಿದ್ದ ಅವರು ಕಳೆದ ಗುರುವಾರ ತವರಿಗೆ ಮರಳಿದ್ದರು ಎಂದು ಶಿವಾನಂದ್ ಹೇಳಿದ್ದಾರೆ.