ದಿನದ ಸುದ್ದಿ
ಕ್ಯೂ-ಸ್ಪೈಡರ್ಸ್ ವತಿಯಿಂದ ಉಚಿತ ಉದ್ಯೋಗದರಿತ ಕೌಶಲ್ಯ ತರಬೇತಿ ಆಯ್ಕೆ ಪ್ರಕ್ರಿಯೆ
(ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಅಡಿಯಲ್ಲಿ ಆಯೋಜನೆ)
ಸುದ್ದಿದಿನ,ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ನೇತೃತ್ವದಲ್ಲಿ ಖ್ಯಾತ ಐಟಿ ತರಬೇತಿ ಸಂಸ್ಥೆ ಕ್ಯೂ-ಸ್ಪೈಡರ್ಸ್, ಎಸ್ ಎಸ್ ಕೆರ್ ಟ್ರಸ್ಟ್ ದಾವಣಗೆರೆ ವಿ ವಿ ವತಿಯಿಂದ ಉದ್ಯೋಗಾಧಾರಿತ ತರಬೇತಿ ಆಯ್ಕೆ ಪ್ರಕ್ರಿಯೆ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬಿ.ಸಿ. ತಹಸಿಲ್ದಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಶ್ರೀ ವೀರೇಶ್ ಪಟೇಲ್ ರವರು ಮಾತನಾಡಿ, ಕ್ಯೂ-ಸ್ಪೈಡರ್ಸ್ ಸಂಸ್ಥೆ ಅನೇಕ ಯುವಕರಿಗೆ ಉದ್ಯೋಗದ ಅವಕಾಶ ಒದಗಿಸುತ್ತಿದ್ದು, ತರಬೇತಿ ಮೂಲಕ ಅವರ ತಾಂತ್ರಿಕ ಹಾಗೂ ಸಂವಹನ ಕೌಶಲ್ಯಗಳನ್ನು ವೃದ್ಧಿಸಲು ನೆರವಾಗುತ್ತಿದೆ ಎಂದು ವಿವರಿಸಿದರು. ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ನೇರವಾಗಿ ಐಟಿ ಮತ್ತಿತರ ಉದ್ಯೋಗದ ಅವಕಾಶ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಜುನಾಥ ಗಡಿಗುಡಳ ಅತಿಥಿಯಾಗಿ ಭಾಗವಹಿಸಿ, ತರಬೇತಿಯ ಮಹತ್ವ ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವ ಅಗತ್ಯತೆಯನ್ನು ವಿವರಿಸಿದರು.
ಪ್ಲೇಸ್ಮೆಂಟ್ ಸೆಲ್ ಸಂಚಾಲಕರಾದ ವೆಂಕಟೇಶ್ ಬಾಬು ಅವರು ಕೌಶಲ್ಯಗಳ ಮಹತ್ವ ವಿವರಿಸಿದರು.
ಪ್ಲೇಸ್ಮೆಂಟ್ ಸೆಲ್ ಸಂಯೋಜನೆಯೊಂದಿಗೆ ಈ ಆಯ್ಕೆ ಪ್ರಕ್ರಿಯೆ ಸರಳವಾಗಿ ಮತ್ತು ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.
ವಿವಿಧ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಒಟ್ಟು 102 ವಿದ್ಯಾರ್ಥಿಗಳು ಆಯ್ಕೆಯಾದರು. ಕಲಾ ವಿಭಾಗ 33, ವಾಣಿಜ್ಯ ವಿಭಾಗ 48, ವಿಜ್ಞಾನ ವಿಭಾಗ 21ವಿದ್ಯಾರ್ಥಿಗಳು ತರಬೇತಿಗೆ ಆಯ್ಕೆಯಾದರು. ಕಾಲೇಜಿನ ಸ್ನಾತಕ ವಿಭಾಗದ ಪ್ಲೇಸ್ಮೆಂಟ್ ಸಂಚಾಲಕರಾದ ಪ್ರೊ ಸ್ಮಿತಾ ಪ್ರೊ ರಾಜ್ ಮೋಹನ್ ಪ್ರೊ ದಾದಪಿರ್ ಹಾಗೂ ಎಲ್ಲಾ ಅಧ್ಯಾಪಕರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243