ದಿನದ ಸುದ್ದಿ

ಮೈದುಂಬಿ ಹರಿಯುತಿದೆ ಜೋಗ ಜಲಪಾತ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವಿಶ್ವ ವಿಖ್ಯಾತ ಜೋಗ್ ಜಲಪಾತ ಮೈದುಂಬಿ ಹರಿಯುತ್ತಿದೆ.

ಪ್ರಕೃತಿಯ ಸುಂದರ ಮಡಿಲಲ್ಲಿ ಜಲಪಾತ ದುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಮಲೆನಾಡಿನಲ್ಲಿ ಗುಡ್ಡ ,ಬೆಟ್ಟ, ಹಸಿರು ಕಾನನದ ನಡುವೆ ಬಳುಕುತ್ತಾ ಹರಿಯುವ ಶರಾವತಿ ನದಿ ಜೋಗದಲ್ಲಿ ಸುಮಾರು 950 ಅಡಿಗಳಿಂದ ಭೋರ್ಗರೆಯುತ್ತಾ ಧುಮುಕುವ ದೃಶ್ಯ ರುದ್ರ ರಮಣೀಯವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version