ದಿನದ ಸುದ್ದಿ

‘ಪತ್ರಕರ್ತ ಬುಖಾರಿ ಹಂತಕ’ ಓದಿದ್ದು ಬೆಂಗಳೂರಲ್ಲಿ

Published

on

ಸುದ್ದಿದಿನ ಡೆಸ್ಕ್: ರೈಸಿಂಗ್ ಕಾಶ್ಮೀರ್ ಪತ್ರಿಕೆಯಸಂಪಾದಕ ಸುಜಾತ್ ಬುಖಾರಿ ಹತ್ಯೆ ನಡೆಸಿದ ಲಷ್ಕರ್ ಇ ತಯ್ಬಾ ಉಗ್ರಗಾಮಿ ಸಜ್ಜದ್ ಗುಲ್ ಎಂಬ ಆರೋಪಿ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ಮುಗಿಸಿದ್ದಾನೆ ಎಂದು ತಿಳಿದುಬಂದಿದೆ.

ಸದ್ಯ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನೆಲೆಸಿರುವ ಗುಲ್, ಐದು ಕಾಶ್ಮೀರದ ನಿವಾಸಿ. ಲಷ್ಕರ್ ಇ ತಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಸ್ ಸಯೀದ್ ಆದೇಶದ ಮೇಲೆ ಗುಲ್, ಪಾಕ್‍ನಿಂದ ಕಾಶ್ಮೀರಕ್ಕೆ ಬಂದು ಹತ್ಯೆ ಸಂಚು ರೂಪಿಸಿ ಅದರಲ್ಲಿ ಭಾಗಿಯಾಗಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಐದು ವರ್ಷಗಳಹಿಂದೆ ಗುಲ್‍ನನ್ನು ಬಂಧಿಸಲಾಗಿತ್ತು. ನಂತರ ಆತ ಅಲ್ಲಿಂದ ಪಾಕಿಸ್ತಾನಕ್ಕೆ ಪರಾರಿಯಾಗಿ ಲಷ್ಕರ್ ಇ ತಯ್ಬಾ ಸಂಘಟನೆ ಸೇರಿಕೊಂಡು, ಅಲ್ಲಿನ ತರಬೇತಿ ಮುಗಿಸಿದ್ದ ಎಂದು ಪೊಲೀಸ್ ತನಿಖೆಗಳು ತಿಳಿಸಿವೆ.

ರಂಜಾನ್ ಮಾಸದಲ್ಲಿ ಕೇಂದ್ರ ಸರಕಾರವು ಕದನ ವಿರಾಮ ಘೋಷಿಸಿದ ಹಿನ್ನೆಲೆಲ್ಲಿ ರೈಸಿಂಗ್ ಸ್ಟಾರ್ ಸಂಪಾದಕ ಬುಖಾರಿ ಅವರು ವಿರೋಧಿಸಿದ್ದರು. ಲಷ್ಕರ್ ಇ ತಯ್ಬಾ ಸಂಘಟನೆಯ ವಿರುದ್ಧ ಯಾವಾಗಲೂ ಬರೆಯುತ್ತಿದ್ದ ಬುಖಾರಿ ಅವರು ಎಲ್‍ಇಟಿಯ ಹಿಟ್‍ಲಿಸ್ಟ್ ನಲ್ಲಿದ್ದರು ಎಂದು ತಿಳಿದುಬಂದಿದೆ.
ಬುಖಾರಿ ಅವರನ್ನು ಕೊಲ್ಲಲು ಬಂದಿದ್ದ ಗುಲ್, ಬೆಂಗಳೂರಿನಲ್ಲೇ ಓದಿ, ತಾಂತ್ರಿಕ ಕೋರ್ಸ್‍ವೊಂದಕ್ಕೆ ಸೇರಿ ಪರಿಣಿತನೂ ಆಗಿದ್ದ ಎಂದು ತಿಳಿದುಬಂದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version