ದಿನದ ಸುದ್ದಿ

ಗೌರಿ ಲಂಕೇಶ ಹತ್ಯೆ ಪ್ರಕರಣ: ಮತ್ತೆ ಬೆಳಗಾವಿಗೆ ಎಸ್ ಐ ಟಿ ತಂಡ

Published

on

  • ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣ
  • ಮತ್ತೆ ಬೆಳಗಾವಿಗೆ ಎಸ್ ಐ ಟಿ ತಂಡ

ಸುದ್ದಿದಿನ ಡೆಸ್ಕ್: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಚುರುಕಿನ ತನಿಖೆ ನಡೆಸುತ್ತಿರುವ ಎಸ್ ಐ ಟಿ ತಂಡ ಮತ್ತೆ ಬೆಳಗಾವಿ ಭೇಟಿ ಪರಿಶೀಲನೆ ನಡೆಸುತ್ತಿದೆ.

ಬೆಳಗಾವಿ ನಗರ ಹಾಗೂ ಖಾನಾಪುರ ಅರಣ್ಯ ಪ್ರದೇಶ ಸೇರಿದಂತೆ ಹಲವಡೆ ಭೇಟಿ ನೀಡಿದ ಎಸ್ ಐ ಟಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ವೇಳೆ ಎಸ್ ಐ ಟಿ ಅಧಿಕಾರಿಗಳು ಮತ್ತೆ ಮೂವರ ವಿಚಾರಣೆ ನಡೆಸಿದ್ದು, ಮಾಹಿತಿ ಕಲೆಹಾಕಿದ್ದಾರೆ.

ಬೆಳಗಾವಿಯ ಇನ್ನೂ ಅನೇಕ ಜನರ ವಿಚಾರಣೆ ನಡೆಯುವ ಸಾಧ್ಯತೆಯಿದೆ. ಜತೆಗೆ ಎಸ್ ಐಟಿ ತಂಡ ಹಲವು ಸ್ಥಳಗಳ ಪಂಚನಾಮೆ ನಡೆಸಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

Trending

Exit mobile version