ದಿನದ ಸುದ್ದಿ
ಪತ್ರಕರ್ತ ಕೊಳ್ಳೇಗಾಲ ಮಹೇಶ್ ಗೆ ಬೆದರಿಕೆ ಕರೆ
ಸುದ್ದಿದಿನ, ಮೈಸೂರು : ಜಸ್ಟ್ ಕನ್ನಡ ಆನಲೈನ್ ಮೀಡಿಯಾ ಸಂಪಾದಕ, ಹಿರಿಯ ಪತ್ರಕರ್ತ ಕೊಳ್ಳೇಗಾಲ ಮಹೇಶ್‌ಗೆ ಕೀರ್ತಿ ಎಂಬ ಕಿಡಿಗೇಡಿ ಕರೆಮಾಡಿ ಬೆದರಿಕೆ ಹಾಕಿದ್ದಾನೆ
‘ಜಸ್ಟ್ ಕನ್ನಡ’ದಲ್ಲಿ ಬಂದ ಸುದ್ದಿ ವಿಚಾರವಾಗಿ ಮಾತನಾಡಿ, ಕಚೇರಿ ಧ್ವಂಸ ಮಾಡಿ ನಿಮಗೊಂದು ಗತಿ ಕಾಣಿಸುವುದಾಗಿ ಬೆದರಿಕೆ ಹಾಕಿ್ದದ್ದಾನೆ.
ಇದಕ್ಕೆ ಸಂಬಂದಿಸಿದಂತೆ ವ್ಯಕ್ತಿಯ ದೂರವಾಣಿ ಸಮೇತ ಪೊಲೀಸರಿಗೆ ಕೊಳ್ಳೇಗಾಲ ಮಹೇಶ್
ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜಸ್ಟ್ ಕನ್ನಡ ಕಚೇರಿ ಹಾಗೂ ತಮಗೆ ಸೂಕ್ತ ರಕ್ಷಣೆ ನೀಡುವಂತೆ ದೂರಿನಲ್ಲಿ ಮಹೇಶ್ ಮನವಿಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401