ದಿನದ ಸುದ್ದಿ
ಪತ್ರಕರ್ತ ಪಿ.ವರದರಾಜು ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ, ದಾವಣಗೆರೆ : ಸುವರ್ಣ ಸುದ್ದಿ ವಾಹಿನಿ ದಾವಣಗೆರೆ ಜಿಲ್ಲಾ ವರದಿಗಾರ ಸಿ.ವರದರಾಜು ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.
‘ ವೀಕ್ಷಕರ ಮೇಲೆ ಸುದ್ದಿವಾಹಿನಿಗಳ ಪ್ರಭಾವ : ಒಂದು ಅದ್ಯಯನ’ ಎಂಬ ವಿಷಯದ ಮೇಲೆ ಕುವೆಂಪು ವಿಶ್ವವಿದ್ಯಾಲಯದ ‘ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ’ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ ಅಂಡಿಂಜೆ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು. ಫೆಬ್ರವರಿ 15 ರಂದು ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ವಿ.ವಿ ಯಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ನೀಡಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401