ರಾಜಕೀಯ

ಹೃದಯಘಾತದಿಂದ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಿಧನ

Published

on

ಸುದ್ದಿದಿನ, ಬೆಂಗಳೂರು : ಹಿರಿಯ ಕ್ರೈಮ್ ವರದಿಗಾರ, ಸುನೀಲ್ ಹೆಗ್ಗರವಳ್ಳಿ ಅಕಾಲಿಕ ಸಾವನ್ನಪ್ಪಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆ ಮೂಲಕ ತಮ್ಮ ವೃತ್ತಿಜೀವನವನ್ನುಆರಂಭಿಸಿದ ಸುನೀಲ್ ಹೆಗ್ಗರವಳ್ಳಿ ತಮ್ಮ ಸ್ವಂತ ಜಿಲ್ಲೆಯಾದ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಅವರಿಗೆ ಹೃದಯಾಘಾತವಾಯಿತೆಂದು ಹೇಳಲಾಗುತ್ತಿದೆ.

ಹಾಯ್ ಬೆಂಗಳೂರು ಪತ್ರಿಕೆಯ ವರದಿಗಾರರಾಗಿ ಅವರು ಮಾಡಿದ ಸಾಕಷ್ಟು ವರದಿಗಳು ದೊಡ್ಡ ಸಂಚಲನವನ್ನೇ ಮೂಡಿಸಿದ್ದವು.ರವಿ ಬೆಳಗೆರೆಯವರ ಅತ್ಯಾಪ್ತನಾಗಿದ್ದುಕೊಂಡು ನಂತರ ಅನಾರೋಗ್ಯದ ಸನ್ನಿವೇಶದಲ್ಲಿ ಪತ್ರಿಕೆಯನ್ನು ಸಂಪಾದಕನಾಗಿ ಮುನ್ನಡೆಸಿದ್ದರು ಹೆಗ್ಗರವಳ್ಳಿ.

ಆದ್ರೆ ಶೂಟೌಟ್ ವಿವಾದದ ಸನ್ನಿವೇಶದಲ್ಲಿ ರವಿ ಬೆಳಗೆರೆ ಅವರ ಮೇಲೆಯೇ ಸುಪಾರಿ ಆರೋಪ ಮಾಡಿ ಹಾಯ್ ಬೆಂಗಳೂರು ಕಚೇರಿಯಿಂದ ಹೊರಬಿದ್ದಿದ್ದರು ಹೆಗ್ಗರವಳ್ಳಿ.
ನಂತ್ರ ಚಾರ್ಲಿ ಟೈಮ್ಸ್ ಕ್ರೈಮ್ ಪೇಪರ್ ಶುರುಮಾಡಿದ್ರು.ಯೂ ಟ್ಯೂಬ್ ಚಾನೆಲ್ ಕೂಡ ಆರಂಭಿಸಿ ಗಮನ ಸೆಳೆದಿದ್ದರು.ಅವರ ಅಕಾಲಿಕ ನಿಧನಕ್ಕೆ ಪತ್ರಕರ್ತ ಸಮೂಹ ವಿಷಾದ-ಸಂತಾಪ ವ್ಯಕ್ತಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version