ದಿನದ ಸುದ್ದಿ

ನ್ಯಾಯವಾದಿ ವೃತ್ತಿ ತರಬೇತಿ ; ಅರ್ಜಿ ಆಹ್ವಾನ

Published

on

ಸುದ್ದಿದಿನ,ಶಿವಮೊಗ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು 2024-25 ಸಾಲಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ಎರಡು ವರ್ಷಗಳ ತರಬೇತಿಗಾಗಿ ಪರಿಶಿಷ್ಟ ಜಾತಿಯ ಅರ್ಹ ಕಾನೂನು ಪದವೀಧರರಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯವರಾಗಿದ್ದು, ಪ.ಜಾ.ಗೆ ಸೇರಿದವರಾಗಿರಬೇಕು. ಕಾನೂನು ಪದವಿ ಪಡೆದು 2 ವರ್ಷಗಳ ಒಳಗಿರಬೇಕು. ಆಯ್ಕೆಯಾದವರಿಗೆ ಪ್ರತಿ ಮಾಹೆ ಹತ್ತು ಸಾವಿರ ರೂ.ಗಳ ಶಿಷ್ಯವೇತನ ನೀಡಲಾಗುವುದು.
ಆಸಕ್ತರು ಇಲಾಖೆಯ ವೆಬ್‍ಸೈಟ್ WWW.SW.KAR.NIC.IN ರ ಮೂಲಕ ಜುಲೈ 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪೃಥ್ವಿ ಮ್ಯಾನ್ಷನ್, ವಿನೋಬನಗರ, 100 ಅಡಿರಸ್ತೆ, ಶಿವಮೊಗ್ಗ ಇಲ್ಲಿಗೆ ಖುದ್ದಾಗಿ ಅಥವಾ ವೆಬ್‍ಸೈಟ್ ಅಥವಾ ದೂ.ಸಂ.: 08182-249241 ನ್ನು ಸಂಪರ್ಕಿಸುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version