ದಿನದ ಸುದ್ದಿ

ಮೊಬೈಲ್ ಟವರ್‍ಗಳ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಜೂಹಿ ಚಾವ್ಲಾ

Published

on

ಸುದ್ದಿದಿನ ಡೆಸ್ಕ್: ನಗರ ಪ್ರದೇಶಗಳಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರವ ಮೊಬೈಟ್ ಟವರ್‍ಗಳ ವಿರುದ್ಧ ನಟಿ ಜೂಹಿ ಚಾವ್ಲಾ ಅವರು ಸುಪ್ರೀಂ ಕೋರ್ಟ್‍ನಲ್ಲಿ ಹೂಡಿರುವ ದಾವೆಯನ್ನು ಕೈಗೆತ್ತಿಕೊಳ್ಳಲು ಪರಮೋಚ್ಛ ನ್ಯಾಯಾಲಯವು ನಿರ್ಧರಿಸಿದೆ.
ಅಪರ್ಣ ಭಟ್ ಎಂಬ ವಕೀಲೆ ನೆರವಿನಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಜೂಹಿ ಅವರು ಮೊಬೈಲ್ ಟವರ್‍ಗಳು ಹೊರ ಸೂಸುವ ಎಲೆಕ್ಟ್ರೋ ಮ್ಯಾಗ್ನಟಿಕ್ ಫೀಲ್ಡ್ ವಿಕಿರಣಗಳ ಪರಿಣಾಮ ಜನಸಾಮಾನ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಕೂಡಲೇ ಒಂದು ಮಾರ್ಗದರ್ಶಿ ಸೂಚಿ ಹೊರಡಿಸಬೇಕು ಎಂದು ಜೂಹಿ ಅವರು ಕೋರಿದ್ದರು.
ಅರ್ಜಿ ಕೈಗೆತ್ತಿಕೊಳ್ಳುವುದಾಗಿ ಹೇಳಿರುವ ಕೋರ್ಟ್ ಮಾರ್ಗದರ್ಶಿ ಸೂಚಿ ರಚನೆ ಮಾಡಲು ಒಪ್ಪಿದೆ. ನಗರ ಪ್ರದೇಶಗಳ್ಲಿ ಗುಂಪು ಗುಂಪಾಗಿ ತಲೆ ಎತ್ತಿರುವ ಮೊಬೈಲ್ ಟವರ್‍ಗಳಿಂದ ತಲೆನೋವು, ಟ್ಯೂಮರ್, ಕ್ಯಾನ್ಸರ್ ನಂತಹ ರೋಗಗಳು ಬರುತ್ತಿವೆ ಎಂದು ಜೂಹಿ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದರು.
ಮೊಬೈಲ್ ಟವರ್‍ಗಳ ನಡುವೆ ಇರುವ ಅಂತರ ಹೆಚ್ಚಿಸಬೇಕು ಅಥವಾ ಫ್ರೀಕ್ವೆನ್ಸಿ ಪ್ರಮಾಣವನ್ನು ತಗ್ಗಿಸಬೇಕು ಎಂದು ಜೂಹಿ ಕೋರಿದ್ದರು.

Leave a Reply

Your email address will not be published. Required fields are marked *

Trending

Exit mobile version