ದಿನದ ಸುದ್ದಿ

ಬಿಜೆಪಿ ಕಾರ್ಯಕರ್ತರಿಗೆ ಪ್ರಬುದ್ಧತೆ ಕಡಿಮೆ ; ಅವರನ್ನು ಮನೆಗೆ ಕಳುಹಿಸುವುದು ಐದು ನಿಮಿಷದ ಕೆಲಸ : ಕೆ.ಎಸ್ ಈಶ್ವರಪ್ಪ

Published

on

ಸುದ್ದಿದಿನ,ಶಿವಮೊಗ್ಗ: ನಮ್ಮ ಹುಡುಗರಿಗೆ ಮೆಚ್ಯುರಿಟಿ ಕಡಿಮೆ ಇದೆ. ಹಾಗಾಗಿ ಅವರು ಹಿರಿಯರ ಬಗ್ಗೆ ತಪ್ಪಾಗಿ ಮಾತನಾಡುತ್ತಾರೆ. ನಾವು ಅವರನ್ನು ಸಮಾಧಾನ ಮಾಡುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ ( K.S. Eshwarappa) ಹೇಳಿದ್ದಾರೆ.

ಶಿವಮೊಗ್ಗದಲ್ಲಿ ( Shivamogga) ಮಾಧ್ಯಮಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ( BJP) ಕಾರ್ಯಕರ್ತರಿಗೆ ಪ್ರಬುದ್ಧತೆ ಕಡಿಮೆ ಇದೆ. ಹಿರಿಯರಾಗಿ ಅವರು ಬೈದರು ಎಂದು ನಾವು ಅವರಿಗೆ ತುರುಗಿ ಬೈಯುವುದು ಸರಿಯಲ್ಲ. ರಾಜೀನಾಮೆ ಕೊಟ್ಟ ಅವರನ್ನು ಮನೆಗೆ ಕಳುಹಿಸುವುದು ಕೇವಲ ಐದು ನಿಮಿಷದ ಕೆಲಸ. ಆದರೆ ಅವರಿಗೆ ಸಮಾಧಾನ ಮಾಡುತ್ತೇವೆ. ಬದಲಾಗುತ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದಿದ್ದಾರೆ.

ಇದನ್ನೂ ಓದಿ | ಕರ್ನಾಟಕದ ಆನೆಗುಂದಿ ಸೇರಿ, ದೇಶದ 8 ಪ್ರವಾಸಿ ತಾಣಗಳನ್ನು ಕರಕುಶಲ ಕ್ಲಸ್ಟರ್‌ಗಳೊಂದಿಗೆ ಬೆಸೆಯಲು ಕೇಂದ್ರ ಚಿಂತನೆ

ಶ್ಯಾಮಪ್ರಸಾದ್ ಮುಖರ್ಜಿಗೆ ಸಾಯುತ್ತೇನೆ ಎಂದು ಗೊತ್ತಿದ್ದರೂ ಏಕೆ ಸಾಯಲು ಹೋದರು. ನಾನು ರಾಜೀನಾಮೆ ನೀಡಿ ಹೋಗುತ್ತೇನೆ ಎಂದು ಹೇಳಿದ್ದರಾ ಅವರು. ಪಂಡಿತ್ ದೀನದಯಾಳು ಉಪಾದ್ಯಾಯ ಅವರನ್ನು ರೈಲಿನಲ್ಲಿ ಕೊಂದು ಹಾಕಿದರು. ದೀನ ದಯಾಳು ಅವರು ನನಗೆ ಪಕ್ಷ ಬೇಡ ಎಂದು ಹೋರಹೋಗಿದ್ದರಾ..? ಎಂದು ಕಾರ್ಯಕರ್ತರಿಗೆ ಪ್ರಶ್ನಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version