ದಿನದ ಸುದ್ದಿ
ದಾವಣಗೆರೆ : ಡಿ.30 ರಂದು ಉಪನ್ಯಾಸಕರ ಅರ್ಹತಾ ಕೆ-ಸೆಟ್ ಪರೀಕ್ಷೆ
ಸುದ್ದಿದಿನ,ದಾವಣಗೆರೆ : ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನು ಡಿ.30 ರಂದು ದಾವಣಗೆರೆ ನಗರದ 10 ಉಪಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.
ಈಗಾಗಲೇ ಕೆ-ಸೆಟ್ ಅಂತರ್ಜಾಲ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ಜಾಲದಲ್ಲಿ ಅಭ್ಯರ್ಥಿಗಳ ಸೂಚನೆಗಳನ್ನು ಮತ್ತು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳನ್ನು ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರವನ್ನು ನೋಡಿಕೊಳ್ಳತಕ್ಕದ್ದು. ಈಗಾಗಲೇ ತಿಳಿಸಿರುವಂತೆ ಅಭ್ಯರ್ಥಿಗಳ ಬಳಿ ಇರುವ ಪ್ರವೇಶ ಪತ್ರ, ಅಭ್ಯರ್ಥಿಯ ಒಂದು ಇತ್ತೀಚಿನ ಭಾವಚಿತ್ರ(ಪಾಸ್‌ಪೊರ್ಟ್ ಅಳತೆ) ಮತ್ತು ಭಾವಚಿತ್ರವಿರುವ ಮೂಲ ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗತಕ್ಕದ್ದು. ಅಭ್ಯರ್ಥಿಯು ಪ್ರವೇಶ ಪತ್ರವಿಲ್ಲದೆ ಬಂದರೆ ಅಂತಹ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ.
ಕೆ-ಸೆಟ್ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ಮೊಬೈಲ್ ಮತ್ತು ಇನ್ನಿತರೆ ಯಾವುದೆ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ದಾವಣಗೆರೆ ವಿಶ್ವವಿದ್ಯಾನಿಲಯದ ಕೆ-ಸೆಟ್ ಪರೀಕ್ಷೆಗಳು ಈ ಕೆಳಕಂಡ ದಾವಣಗೆರೆಯಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು.
ದಾವಣಗೆರೆ ಪರೀಕ್ಷಾ ಉಪಕೇಂದ್ರಗಳು: ಮಹಿಳಾ ಪ್ರಥಮ ದರ್ಜೆ ಕಾಲೇಜು, ಬಿಎಸ್.ಸಿ ಪ್ರಥಮ ದರ್ಜೆ ಕಾಲೇಜು, ಬಾಪೂಜಿ ಇಂಜನಿಯರಿಂಗ್ ಕಾಲೇಜು, ಬಾಪೂಜಿ ಪಾಲಿಟೆಕ್ನಿಕ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎ.ಆರ್.ಜಿ ಪ್ರಥಮ ದರ್ಜೆ ಕಾಲೇಜು, ಎ.ವಿ.ಕೆ ಮಹಿಳಾ ಪ್ರಥಮ ದರ್ಜೆ ಕಾಲೇಜು, ಎಂ.ಎಸ್.ಬಿ.ಪ್ರಥಮ ದರ್ಜೆ ಕಾಲೇಜು, ಜಿ.ಎಂ.ಐ.ಟಿ ಇಂಜನಿಯರಿಂಗ್ ಕಾಲೇಜು, ಜಿ.ಎಂ.ಎಸ್.ಅಕಾಡೆಮಿ.
ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ : http://davangereuniversity.ac.in , http://kset.uni-mysore.ac.in ಗೆ ಸಂಪರ್ಕಿಸಬಹುದೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕೆ-ಸೆಟ್ ನೋಡಲ್ ಅಧಿಕಾರಿ ಪ್ರೊ.ಜೆ.ಕೆ.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401