ದಿನದ ಸುದ್ದಿ
ಕೆ. ಶಿವರಾಜಕುಮಾರ್ ಅವರಿಗೆ ಪಿಎಚ್ ಡಿ ಪದವಿ
ಸುದ್ದಿದಿನ,ದಾವಣಗೆರೆ:ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಸ್‌ಜೆಎಂ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಶಿವರಾಜಕುಮಾರ್ ಮಂಡಿಸಿದ ‘ಪ್ರಧಾನ ಮಂತ್ರಿ ಜನಧನ ಯೋಜನಾ ಆಯ್ಯಂಡ್ ಫೈನಾನ್ಸಿಯಲ್ ಇನ್ಸೂಷನ್ ಇನ್ ದಾವಣಗೆರೆ ಡಿಸ್ಟ್ರಿಕ್ಟ್’ (Pradhan mantri Jan Dhan Yojana and Financial inclusion in Davanagere District ) ಪ್ರಬಂಧಕ್ಕೆ ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.
ಡಾ.ಆರ್.ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು. ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರು ಪ್ರಧಾನ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇವರು ಮೂಲತಃ ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದವರು. ಇವರ ತಂದೆ ಬಡಗಿ ಕರಿಯಪ್ಪ ತಾಯಿ ಗೌರಮ್ಮ ಪ್ರಸ್ತುತ ಇವರು ದಾವಣಗೆರೆಯಲ್ಲಿ ವಾಸವಾಗಿದ್ದಾರೆ.
ಶುಭಹಾರೈಕೆ
ಪಿಎಚ್ ಡಿ ಪದವಿ ಪಡೆದಿರುವ ಕೆ. ಶಿವರಾಜ್ ಕುಮಾರ್ ಅವರ ಪತ್ನಿ ನಂದಿನಿ ಎನ್, ಸಹೋದರರಾದ ಹೇಮಂತರಾಜ್.ಕೆ ,ಕೆ.ಸುರೇಶ್, ಕೆ.ಚನ್ನಬಸಪ್ಪ ಹಾಗೂ ಅತ್ತಿಗೆಯರಾದ ಎಂ ಕೆ.ಶುಭ, ಜೆ ಭಾಗ್ಯ,ಜಿ.ಸುಮಲತಾ ಇವರು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243