ಕ್ರೀಡೆ

ಹರಪನಹಳ್ಳಿ | ಫೀಸ್ ಕಟ್ಟಲು ಹಣ‌ ಕೊಡದ್ದಕ್ಕೆ ರಾಷ್ಟ್ರೀಯ ಕಬ್ಬಡ್ಡಿ ಕ್ರೀಡಾಪಟು ಗಾಯತ್ರಿ ಆತ್ಮಹತ್ಯೆ

Published

on

ಚಿತ್ರ : ಗಾಯಿತ್ರಿ ಆತ್ಮಹತ್ಯೆಗೆ ಶರಣಾದ ರಾಷ್ಟ್ರೀಯ ಕ್ರೀಡಾ ಪಟು

ಸುದ್ದಿದಿನ,ಹರಪನಹಳ್ಳಿ: ದಾವಣಗೆರೆ ಜಿಲ್ಲೆಯ, ಹರಪನಹಳ್ಳಿ ತಾಲೂಕಿನ ಕೊಂಗನಹೊಸೂರು ಗ್ರಾಮ ರಾಷ್ಟ್ರೀಯ ಕಬ್ಬಡ್ಡಿ ಕ್ರೀಡಾ ಪಟು ಹಾಗೂ ಬಿಎಸ್ಸಿ ವಿದ್ಯಾರ್ಥಿನಿ ಯೊಬ್ಬಳು ಶುಲ್ಕ ಪಾವತಿಗೆ ಬೇಗ ಹಣ ನೀಡಲಿಲ್ಲ ಎಂದು ಸಿಟ್ಟಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಾಯತ್ರಿ(21) ಆತ್ಮಹತ್ಯೆಗೆ ಶರಣಾದ ಕ್ರೀಡಾ ಪಟು. ಈಕೆ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ಅಭ್ಯಾಸ ಮಾಡುತ್ತಿದ್ದು, ಲಾಕ್ ಡೌನ್ ಆದಾಗಿನಿಂದ ತಾಲೂಕಿನ ಕೊಂಗನಹೊಸೂರು ಗ್ರಾಮದ ತಮ್ಮ ಮನೆಯಲ್ಲಿ ವಾಸವಾಗಿದ್ದರು.

ಕಾಲೇಜಿಗೆ ಹೋಗಿ ಶುಲ್ಕ ಪಾವತಿಸಿ ಬರುತ್ತೇನೆ ಹಣ ಕೊಡಿ ಎಂದು ತಂದೆಯನ್ನು ಕೇಳಿದ್ದಾಳೆ, ಆಗ ಅವರ ತಂದೆ ಷಡಾಕ್ಷರಯ್ಯನವರು ಬೀಜ ಗೊಬ್ಬರ ತಂದಿದ್ದೇನೆ, ಈಗ ಹಣ ಇಲ್ಲ, ನಾಳೆ ಹೊಂದಾಣಿಕೆ ಮಾಡಿ ಕೊಡುತ್ತೇನೆ ಎಂದು ಹೇಳಿದ್ದರು.

ಮೆ.29 ರಂದು ಬೆಳಿಗ್ಗೆ ತಂದೆ ಜಮೀನಿಗೆ ಬಿತ್ತನೆ‌ ಮಾಡಲು ಹೋಗಿದ್ದಾರೆ, ಹೋಗಿದ್ದಾರೆ, ಮನೆಯಲ್ಲಿ ಒಬ್ಬಳೆ ಇದ್ದ ಗಾಯಿತ್ರಿ ವ್ಯವಸಾಯಕ್ಕೆ ತಂದ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಆಕೆಯನ್ನು ಪಕ್ಕದ ಮನೆಯವರು ನೋಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು.

ಬಳಿಕ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಜೂ.6 ರಂದು ಸಾವನ್ನಪ್ಪಿದ್ದಾಳೆ. ತಂದೆ ಷಡಾಕ್ಷರಯ್ಯನವರ ದೂರಿನ ಮೇರೇಗೆ ಸ್ಥಳೀಯ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತಮ ಕಬ್ಬಡಿ ಕ್ರೀಡಾ ಪಟುವಾಗಿದ್ದ ಗಾಯತ್ರಿ ಕಳೆದ 2 ವರ್ಷಗಳ ಹಿಂದೆ ದಾವಣಗೆರೆಯ ಮೈತ್ರಿ ಸ್ಪೋಟ್ಸ ಕ್ಲಬ್ ಗೆ ಸೇರಿ ತರಬೇತಿ ಪಡೆದಿದ್ದಳು.

ಈ ಕುರಿತು ಪ್ರತಿಕ್ರಿಯೆ ನೀಡಿದ ತರಬೇತುದಾರ ದಾವಣಗೆರೆಯ ಎ.ಎಂ. ರವಿಕುಮಾರ 2019 ರಲ್ಲಿ ನೇಪಾಳದ ಕಟ್ಮಂಡೊ ದಲ್ಲಿ ನಡೆದ ಪಂದ್ಯಾವಳಿಯಲ್ಲಿ ಕರ್ನಾಟಕ ಕಬ್ಬಡಿ ತಂಡದಿಂದ ಆಡಿ ಎರಡನೇ ಸ್ಥಾನ ಪಡೆದು ಮೆಡಲ್ ಗಳಿಸಿದ್ದಳು.

ದಾವಣಗೆರೆ ಕ್ಲಬ್ ನಿಂದ ಮಹಾರಾಷ್ಟ್ರ ಹಾಗೂ ಬೆಳಗಾಂ ಹೀಗೆ 2-3 ಓಪನ್ ಟೂರ್ನಿ ಮೆಂಟ್ ನಲ್ಲಿ ಪಾಲ್ಗೊಂಡಿದ್ದಳು. ಉತ್ತಮ ಕಬ್ಬಡಿ ಕ್ರೀಡಾ ಪಟು ಆಗಿದ್ದಳು, ರಾಷ್ಟ್ರೀಯ , ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾಳೆ, ಬೆಸ್ಟ ರೈಡರ್ ಆಗಿದ್ದಳು. ಓದಿನಲ್ಲೂ ಚೆನ್ನಾಗಿದ್ದಳು, ಬಿಎಸ್ಸಿ ಮುಗಿಸಿ ಐಐಎಸ್ ಮಾಡಬೇಕೆಂಬ ಆಸೆ ಆಕೆಗಿತ್ತು ಎಂದು ಸಂತಾಪ ಸೂಚಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version