ಸಿನಿ ಸುದ್ದಿ
ಬಾಲಿವುಡ್ ಸಕ್ಸಸ್ ಪರೇಡ್ ನಲ್ಲಿ ಆಧುನಿಕ ದೇವದಾಸ್ ಉರುಫ್ ‘ಕಬೀರ್ ಸಿಂಗ್’..!
ಬಿಡುಗಡೆಯಾದ ಮೊದಲನೇ ದಿನವೇ 20ಕೋಟಿ ರೂ. ಗಳಿಕೆ ಯೊಂದಿಗೆ ಬಾಕ್ಸಾಫೀಸಿನಲ್ಲಿ ದಾಖಲೆ ನಿರ್ಮಿಸಿದ್ದಾನೆ ಕಬೀರ್ ಸಿಂಗ್! ವೀಕೆಂಡ್” ವಿತ್ ಕಬೀರ್ ಸಿಂಗ್ “ಎಂಬ ಪ್ರಮೋಷನ್ , ಕೂಡಾ ಕ್ಲಿಕ್ ಆಗಿದ್ದು, ಕಬೀರ್ ಸಿಂಗ್ ನಾ ಅಬ್ಬರಕ್ಕೆ ಬಾಲಿವುಡ್ ಬಾಕ್ಸಾಫೀಸ್ ಥರಥರ!
ತೆಲುಗಿನ ವಿಜಯ್ ದೇವರುಕೊಂಡ ಅಭಿನಯದ ಸೂಪರ್ ಹಿಟ್ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಆಗಿದ್ದರೂ, ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದಾನೆ ಕಬೀರ್ ಸಿಂಗ್. ಬಹಳ ವರ್ಷಗಳ ನಂತರ, ಆಧುನಿಕ ದೇವದಾಸ್ ಆಗಿ ಶಾಹೀದ್ ಕಪೂರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೀತಿ ಕಳೆದುಕೊಂಡ ಆಧುನಿಕ ದೇವದಾಸ್ ಆಗಿ ಕಬೀರ್ ಸಿಂಗ್ ಯುವಪೀಳಿಗೆಯ ಹಾಟ್ ಫೇವರಿಟ್ ಆಗಿದ್ದಾರೆ.ರೀಮೇಕ್ ಸಿನಿಮಾ ಆದರೂ, ಅಧ್ಬುತ ನಟನೆಯಿಂದ ಚಿತ್ರದ ಯಶಸ್ಸಿಗೆ ಕಾರಣರಾಗಿದ್ದಾರೆ. ಕಿಯಾರ ಅದ್ವಾನಿ ಸಹಜ ಮತ್ತು ಸರಳ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಸಂದೀಪ್ ಶೇಂಗಾ ರೈ ಸಾರಥ್ಯದಲ್ಲಿ ಮೂಡಿಬಂದಿದ್ದು, ಹಾಡುಗಳೂ ಸೂಪರ್ ಹಿಟ್ ಆಗಿವೆ.
ದಿಲ್ಲಿಯ ಮೆಡಿಕಲ್ ಕಾಲೇಜು ಒಂದರ ರೆಬೆಲ್ ವಿದ್ಯಾರ್ಥಿಯ ಪ್ರೇಮ ಕಥೆ-ವ್ಯಥೆಯನ್ನ ಹೇಳುತ್ತದೆ ಕಬೀರ್ ಸಿಂಗ್. ಪುರುಷ ಪ್ರಧಾನ ಚಿತ್ರ ವೆನಿಸಿದರೂ, ಪ್ರೀತಿ-ಪ್ರೇಮದ ಕಥಾಹಂದರ ಹೊಂದಿರುವ ಕಬೀರ್ ಸಿಂಗ್ ಪ್ರೇಕ್ಷಕಪ್ರಭುವಿನ ಮನಗೆದ್ದಿರುವುದಂತೂ ಸುಳ್ಳಲ್ಲ. ಕೆಲವು ದೃಶ್ಯಗಳು ಪುರುಷ ಪ್ರಾಧಾನ್ಯತೆ ಸಾರಿದರೆ, ಇನ್ನು A ಸರ್ಟಿಫಿಕೇಟ್ ಹೊಂದಿರುವ ಹಲವು ತುಣುಕುಗಳು , ಕುಟುಂಬ ಸಮೇತರಾಗಿ ಕುಳಿತು ನೋಡಲು ಮುಜುಗರ ಉಂಟು ಮಾಡುತ್ತದೆ.
ಬಾಲಿವುಡ್ ನಲ್ಲಿ ಈ ರೀತಿಯ ಹಸಿ-ಬಿಸಿ ದೃಶ್ಯ ಗಳು ಹೊಸತೇನೂ ಅಲ್ಲವಾದ್ದರಿಂದ , ವರ್ಲ್ಡ್ ಕಪ್ ಹವಾ ನಡುವೆಯೂ ಕಬೀರ್ ಸಿಂಗ್ ಗಟ್ಟಿಯಾಗಿ ನಿಂತಿದ್ದಾನೆ. ಬಾಲಿವುಡ್ ನಲ್ಲಿ ಇತ್ತೀಚೆಗೆ ಸಕ್ಸಸ್ ಪರೇಡ್ ಶುರುವಾಗಿದ್ದು, ಭಾರತ್ ನಂತರ ಗಲ್ಲಾಪೆಟ್ಟಿಗೆಯಲ್ಲಿ ಕಬೀರ್ ಸಿಂಗ್ ನಾ ಘರ್ಜನೆ ಶುರುವಾಗಿದೆ.
–ಚಿತ್ರಶ್ರೀ ಹರ್ಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243