ದಿನದ ಸುದ್ದಿ
ಉಗ್ರರ ಅಟ್ಟಹಾಸ : 48 ವಿದ್ಯಾರ್ಥಿಗಳು ಸಾವು
ಸುದ್ದಿದಿನ ಡೆಸ್ಕ್: ಅಫ್ಘಾನಿಸ್ತಾನದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಅಫ್ಘಾನಿಸ್ತಾನದ ಕಾಬುಲ್ ನಲ್ಲಿ ಉಗ್ರರು ನಡೆಸಿದ ಭೀಕರ ಬಾಂಬ್ ಸ್ಫೋಟದಲ್ಲಿ 48 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಇನ್ನು 67 ಮಂದಿ ಗಾಯಗೊಂಡಿದ್ದಾರೆ. ಕಾಬುಲ್ ನ ಒಂದು ಶಿಕ್ಷಣ ಕೇಂದ್ರದಲ್ಲಿ ಈ ಬ್ಲಾಸ್ಟ್ ನಡೆದಿದ್ದು ಈವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಇದರ ಹೊಣೆ ಹೊತ್ತಿಲ್ಲ. ಮೃತಪಟ್ಟ ಎಲ್ಲ ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನವರು. ದಾಳಿಯನ್ನು ಯುನಿಸೆಫ್ ಸೇರಿದಂತೆ ವಿವಿಧ ದೇಶಗಳು
ತೀವ್ರವಾಗಿ ಖಂಡಿಸಿವೆ. ತಾಲಿಬಾನ್ ಉಗ್ರ ಸಂಘಟನೆ ಇದರಲ್ಲಿ ತನ್ನ ಕೈವಾಡವಿಲ್ಲ ಎಂದು ಹೇಳಿದೆ.