ದಿನದ ಸುದ್ದಿ

ಕಲಬುರಗಿಯಲ್ಲಿ 11 ತಿಂಗಳ‌ ಮಗು ಸೇರಿ 27 ಜನರಿಗೆ ಕೊರೋನಾ ಸೋಂಕು ಪತ್ತೆ

Published

on

ಸುದ್ದಿದಿನ,ಕಲಬುರಗಿ: ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 11 ತಿಂಗಳ‌ ಗಂಡು‌ ಮಗು ಸೇರಿಸಿ ಜಿಲ್ಲೆಯ 27 ಜನರಿಗೆ ರವಿವಾರ ಕೊರೋನಾ ಸೋಂಕು‌ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.

ಇವರೆಲ್ಲರು ಸರ್ಕಾರಿ ಕ್ವಾರಂಟೈನ್ ದಲ್ಲಿದ್ದು, ಸೋಂಕು ಪತ್ತೆಯಾದ ಕೂಡಲೆ ಇವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂದರು.

ಚಿತ್ತಾಪುರ ತಾಲೂಕಿನ ಹನಿಕೇರಾ ತಾಂಡಾದ 22 ವರ್ಷದ ಯುವತಿ (P-2956), 30 ವರ್ಷದ ಮಹಿಳೆ (P-2957), ಅಳ್ಳೊಳ್ಳಿ ಹತ್ತಿರದ ಧರ್ಮನಾಯಕ್ ತಾಂಡಾದ 25 ವರ್ಷದ ಯುವಕ (P-2958), 30 ವರ್ಷದ ಮಹಿಳೆ (P-2959), ಚಿತ್ತಾಪುರ ಪಟ್ಟಣದ 40 ವರ್ಷದ ಮಹಿಳೆ (P-2935)‌, 6 ವರ್ಷದ ಬಾಲಕಿ (P-2971) ಹಾಗೂ 11 ತಿಂಗಳ ಗಂಡು ಮಗು (P-2573), ಲಾಡ್ಲಾಪುರದ 6 ವರ್ಷದ ಬಾಲಕ (P-2961), ದೇವಾಪುರ ಗ್ರಾಮದ 25 ವರ್ಷದ ಯುವಕ (P-2973), 35 ವರ್ಷದ ಮಹಿಳೆ (P-2975), 7 ವರ್ಷದ ಬಾಲಕಿ (P-2976),
6 ವರ್ಷದ ಬಾಲಕಿ (P-2977) ಹಾಗೂ 32 ವರ್ಷದ ಮಹಿಳೆ (P-2978), ಕಮರವಾಡಿ ತಾಂಡಾದ 40 ವರ್ಷದ ಪುರುಷ (P-2974) ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

ಆಳಂದ ತಾಲೂಕಿನ ಭೂಸನೂರ ತಾಂಡಾದ 26 ವರ್ಷದ ಯುವತಿ (P-3158), 26 ವರ್ಷದ ಯುವತಿ (P-3159), 25 ವರ್ಷದ ಯುವಕ (P-3160), 10 ವರ್ಷದ ಬಾಲಕಿ (P-3161) ಹಾಗೂ 4 ವರ್ಷದ ಬಾಲಕ (P-3162), ಎನ್.ಎನ್.ತಾಂಡಾದ
18 ವರ್ಷದ ಯುವತಿ (P-3163), 30 ವರ್ಷದ ಯುವಕ (P-3164) ಹಾಗೂ 16 ವರ್ಷದ ಬಾಲಕಿ (P-3165) ಹಾಗೂ ಕಿಣ್ಣಿಸುಲ್ತಾನ ಗ್ರಾಮದ 16 ವರ್ಷದ ಬಾಲಕಿಗೂ (P-2976) ಮಹಾಮಾರಿ ಕೊರೋನಾ ಅಂಟಿಕೊಂಡಿದೆ.

ಕಲಬುರಗಿ ತಾಲೂಕಿನ ಇಟಗಾ ಗ್ರಾಮದ 21 ವರ್ಷದ ಯುವಕ (P-3167) ಮತ್ತು 35 ವರ್ಷದ ಯುವತಿ (P-3168) ಹಾಗೂ ಕಮಲಾಪುರ ತಾಲೂಕಿನ ಡೊಂಗರಗಾಂವ ಹತ್ತಿರದ ಗುತ್ತಿ ತಾಂಡಾದ 30 ವರ್ಷದ ಮಹಿಳೆ (P-3169) ಮತ್ತು 28 ವರ್ಷದ ಯುವತಿ (P-3182) ಕೋವಿಡ್-19 ದೃಢವಾಗಿದೆ.

ಇದರಿಂದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 280ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 128 ಜನ ಗುಣಮುಖರಾಗಿ ಈಗಾಗಲೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 145 ಮಾತ್ರ ಸಕ್ರೀಯ ರೋಗಿಗಳಿದ್ದಾರೆ ಎಂದು ಶರತ್‌ ಬಿ. ವಿವರಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version