ದಿನದ ಸುದ್ದಿ

ಮನೆ ಕಳ್ಳತನ ನಡೆದ ಮೂರು ಗಂಟೆಯಲ್ಲಿ ಕಳ್ಳರು ಅಂದರ್; ಕಲಬುರಗಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

Published

on

ಸುದ್ದಿದಿನ,ಕಲಬುರಗಿ: ಬೀಗ ಮುರಿದು ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದ ಖತರ್ನಾಕ ಕಳ್ಳರಿಬ್ಬರನ್ನು ಕೇವಲ ಮೂರು ಗಂಟೆ ಅವಧಿಯಲ್ಲಿ ಬಂಧಿಸಿ ಕಂಬಿಹಿಂದೆ ತಳ್ಳುವಲ್ಲಿ ರೋಜಾ ಠಾಣೆ ಪೊಲೀಸರು‌ ಯಶಸ್ವಿಯಾಗಿದ್ದಾರೆ.

ನಗರದ ಇಸ್ಲಾಮಬಾದ್ ಕಾಲೋನಿಯ ಶೇಖ್ ಅಮೀರ್ (25) ಹಾಗೂ‌ ಮಹ್ಮದ್ ಗೌಸ್ (25) ಬಂಧಿತ ಆರೋಪಿಗಳು. ಬಂಧಿತರಿಂದ 40 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಆಭರಣ 18 ಸಾವಿರ ನಗದು ಹಣ ಸೇರಿ ಸರಿಸುಮಾರು 2.35 ಲಕ್ಷ ಮೌಲ್ಯದ‌ ಆಸ್ತಿ ವಶಪಡಿಸಿಕೊಂಡಿದ್ದಾರೆ.

ಜೂ.30 ರಂದು ಸಾಯಂಕಾಲ ಇಸ್ಲಾಮಾಬಾದ್ ಕಾಲೋನಿ ಅಬ್ಬಾಸ್ ಮಜೀದ್ ಹತ್ತಿರದ ಮನೆಯೊಂದರ ಬೀಗ ಮುರಿದು ಮನೆಯಲ್ಲಿದ್ದ ಚಿನ್ನ, ಬೆಳ್ಳಿ, ನಗದು ಕಳ್ಳತನ ಮಾಡಲಾಗಿತ್ತು. ಈ ಕುರಿತು ಮಹ್ಮದ್ ರಫೀಕ್ ಎಂಬುವವರು ರೋಜಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೇರೆಯಾಗಿತ್ತು. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಕಳ್ಳತನ ನಡೆದು ಕೇವಲ ಮೂರು ಗಂಟೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಕಂಬಿಹಿಂದೆ ತಳ್ಳಿದ್ದಾರೆ. ಪೊಲೀಸರ ಕಾರ್ಯಕ್ಕೆ ಬಡಾವಣೆಯ ಜನರು ಹಾಗೂ ನಗರ ಪೊಲೀಸ್ ಆಯುಕ್ತ ರವಿಕುಮಾರ, ಡಿಸಿಪಿ ಆಡೂರು ಶ್ರೀನಿವಾಸಲು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version