ದಿನದ ಸುದ್ದಿ
ಕಲಬುರಗಿ ಪ್ರವಾಹ | ಫೈರ್ ತಂಡದಿಂದ 10 ಜನರ ರಕ್ಷಣೆ
ಸುದ್ದಿದಿನ,ಕಲಬುರಗಿ : ಭೀಮಾ ನದಿ ಪ್ರವಾಹದಿಂದ ಅಫಜಲಪೂರ ತಾಲೂಕಿನಲ್ಲಿ ನಡುಗಡ್ಡೆಯಾಗಿರುವ ಭೋಸಗಾ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 7 ಜನರನ್ನು ವಿಶ್ವನಾಥ ನೇತೃತ್ವದ ಅಗ್ನಿಶಾಮಕ ದಳದ ತಂಡವು ಫೈರ್ ಬೋಟ್ ಮುಖಾಂತರ ಅವರನ್ನು ರಕ್ಷಿಸಿ ಗ್ರಾಮದ ಎತ್ತರ ಪ್ರದೇಶದಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದಾರೆ.
ಇದಲ್ಲದೆ ಹಿರಿಯಾಳ ಗ್ರಾಮದಲ್ಲಿ ಇಬ್ಬರು ಮತ್ತು ಮಣ್ಣೂರಿನಲ್ಲಿ ಓರ್ವರನ್ನು ಸಹ ತಂಡ ಸಂರಕ್ಷಣೆ ಮಾಡಿದೆ. ಕಲಬುರಗಿ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಂತ್ರಸ್ತರ ಸ್ಥಳಾಂತರಕ್ಕೆ ಮಾರ್ಗದರ್ಶನ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243