ರಾಜಕೀಯ
ತೆಲಂಗಾಣದಲ್ಲಿ ಚಂದ್ರೋದಯ..!
ಸುದ್ದಿದಿನ ಡೆಸ್ಕ್ : ಹೈದರಾಬಾದ್ ತೆಲಂಗಾಣದಲ್ಲಿ ನಿರೀಕ್ಷೆಯಂತೆ ಕಲ್ವಕುಂಟ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್) ಹೊಸ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ಬಳಿಕ ಎರಡನೇ ಭಾರಿ ವಿಧಾನಸಭೆಗೆ ನಡೆದ ಚುನಾ ವಣೆಯಲ್ಲಿ ಭಾರಿ ಯಶಸ್ಸು ಗಳಿಸಿದೆ. ವಿಧಾನಸಭೆಗೆ ನಡೆದ ಚುನಾವನೆಯಲ್ಲಿ ಕೆಸಿಆರ್ ನೇತೃತ್ವದ ಟಿಆರ್‍ಎಸ್ 87 ಕಾಂಗ್ರೆಸ್ 22 ಬಿಜೆಪಿ 1 ಇತರರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಟಿಆರ್‍ಎಸ್ ನಾಯಕ ಚಂದ್ರಶೇಖರ್ ರಾವ್. ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ ತಮ್ಮ ಮೇಲಿದ್ದ ಜವಾ ಬ್ದಾರಿಯನ್ನು ಕೆಸಿಆರ್ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿ ಚಂದ್ರಶೇಖರ್ ಅವರು ಹಮ್ಮಿಕೊಂಡ ಜನಪರ ಯೋಜನೆಗಳು ಅವರನ್ನು ಯಶಸ್ಸಿನತ್ತ ಕೊಂಡೊಯ್ದಿವೆ ಎನ್ನುವುದ ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಇದೂ ಅಲ್ಲದೇ ಚಂದ್ರಶೇಖರ್ ರಾವ್ ಅವರು ತೆಲಂಗಾಣದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಸಾಲ ಮನ್ನಾ: ರೈತರ ಒಂದು ಲಕ್ಷದ ವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಕೆಸಿಆರ್ ಪ್ರಣಾಳಿ ಕೆಯಲ್ಲಿ ಸೂಚಿಸಿದ್ದರು. ರೈತಬಂಧು ಯೋಜನೆಯ ಮೂಲಕ ರೈತ ಸಮುದಾಯದ ಮನ ಗೆದ್ದಿದ್ದ ಕೆಸಿಆರ್ ಅವರು ಸಾಲ ಮನ್ನಾ ಘೋಷಣೆಯ ಮೂಲಕವೂ ರೈತರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಉಚಿತ ವಿದ್ಯುತ್; ಕಾಕತೀಯ ವೈಭವ
2015ರ ಮಾರ್ಚ್‍ನಲ್ಲಿ ಪ್ರಾರಂಭವಾದ ಈ ಯೋಜನೆಯಡಿ ತೆಲಂಗಾಣದಾದ್ಯಂತ 46 ಸಾವಿರ ಕೆರೆಗಳು, ಕಾಲುವೆಗಳು ನಿರ್ಮಾಣ ಮಾಡಿ ಸುಮಾರು 270 ಟಿಎಂಸಿ ನೀರನ್ನು ಸಂಗ್ರಹಿಸುವುದು ಸರ್ಕಾರದ ಪ್ರಮುಖ ಗುರಿಯಗಿತ್ತು. ಸುಮಾರು 2ಲಕ್ಷ ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿತ್ತುದ್ದ ಈಗಾಗಲೇ ಸಾಕಷ್ಟು ಗ್ರಾಮಗಳು ಇದರ ಪ್ರಯೋಜನ ಪಡೆದಿವೆ. ರಾಜ್ಯಕ್ಕೆ 24 ಗಂಟೆಗಳ ಕಾಲ ವಿದ್ಯುತ್ ನೀಡುವ ಮೂಲಕ ರಾಜ್ಯದ ಜನರ ಕೀರ್ತಿಯನ್ನು ಟಿಆರ್‍ಎಸ್ ಗಳಿಸಿತ್ತು. ರಾಜ್ಯಕ್ಕೆ ವಿದ್ಯುತ್ ಸಮಸ್ಯೆ ಬರದಂತೆ ನೋಡಿಕೊಂಡ ಕೆಸಿಆರ್ ಅವರು ಸಮಸ್ಯೆ ಎದುರಾದಾಗ ನೆರೆಯ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ನಾಡಿನ ಜನತೆಗೆ ಪೂರೈಸಿದರು. ಇದು ಜನರ ಮನಸ್ಸಿನಲ್ಲಿ ಅಚ್ಚಳಿಯದರೆ ಉಳಿಯಿತು.
ರೈತುಬಂಧು ಯೋಜನೆ
ರೈತ ಬಂಧು ಯೋಜನೆ ಟಿಆರ್‍ಎಸ್ ಪಕ್ಷದ ಪ್ರಮುಖ ಯೋಜನೆಯಾಗಿತ್ತು. ಚುನಾವಣೆಗೆ ಹೊಗಬೇಕು ಎನ್ನುವ ಹೊಸ್ತಿಲಲ್ಲೇ ಕೆಸಿಆರ್ ಈ ಯೋಜನೆಗೆ ಚಾಲನೆ ನೀಡಿದ್ದರು. ಸುಮಾರು ಒಂದು ಕೋಟಿ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಯೋಜನೆ ಪ್ರಾರಂಭಿಸಲಾಗಿತ್ತು. ಈ ಯೋಜನೆಯಲ್ಲಿ ಹಣ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಆಗುತ್ತದೆ. ಇದು ರೈತವರ್ಗವನ್ನು ಆಕರ್ಷಿಸಿತು. ಯೋಜನೆಯಡಿ ಮುಖ್ಯಮಂತ್ರಿಯವರು ಚುನಾವಣೆಗೂ ಮುನ್ನ ಎರಡು ಭಾರಿ ಚೆಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದು ಟಿಆರ್‍ಎಸ್‍ಗೆ ಲಾಭವಾಗಿ ಪರಿಣಮಿಸಿತು.
ಶಾದಿ ಮುಬಾರಕ್
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಧಿ. ವಿವಿಧ ಸಮುದಾಯದವರಿಗೆ ಪ್ರತ್ಯೇಖ ಭವನಗಳ ನಿರ್ಮಾಣ, ಅಲ್ಪಸಂಖ್ಯಾತ ಸಮುದಾಯದವರಿಗೆ `ಶಾದಿ ಮುಬಾರಕ್’ ನಂತಹ ಯೋಜನೆಗಳನ್ನು ಕೆಸಿಆರ್ ಜಾರಿಗೊಳಿಸಿದ್ದೂ ಅವರಿಗೆ ವರದಾನವಾಗಿ ಪರಿಣಮಿಸಿತು. ಬ್ರಾಹ್ಮಣ, ರೆಡ್ಡಿ ಸೇರಿದಂತೆ ರಾಜ್ಯದ ಸುಮಾರು 30ಕ್ಕೂ ಹೆಚ್ಚು ಸಮುದಾಯಗಳಿಗೆ ಸಮುದಾಯ ಭವನಗಳ ನಿರ್ಮಾಣ ಮಾಡಿಕೊಡುವ ಭರವಸೆಯನ್ನು ಕೆಸಿಆರ್ ನೀಡಿದ್ದರು. ಇದು ಎಲ್ಲ ವರ್ಗದ ಮತದಾರರನ್ನು ಸೆಳೆಯಿತು. ಹೀಗೆ ಚಂದ್ರಶೇಖರ್ ಅವರು ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳಲು ರಾಜ್ಯದ ಜನರಿಗೆ ಯಾವ ರೀತಿಯ ಯೋಜನೆಗಳು ಅಗತ್ಯವಿದೆಯೋ ಅದನ್ನೆಲ್ಲವನ್ನು ಕೈಗೆತ್ತಿಕೊಳ್ಳಲು ಸಂಕಲ್ಪದೊಂದಿಗೆ ಜನತೆಯ ಬಳಿ ಹೋಗಿದ್ದರು. ಆ ಸಂಕಲ್ಪಗಳು ಅವರಿಗೆ ಯಶಸ್ಸು ತಂದುಕೊಟ್ಟಿದೆ. ಕಾರು ಮತ್ತೊಮ್ಮೆ ತೆಲಂಗಾಣ ಸುತ್ತಲು ಪ್ರಾರಂಭಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401