ದಿನದ ಸುದ್ದಿ

ನಟಿ ಕಂಗನಾ ರಾಣಾವತ್ ಗೆ ಕಾನ್ಸ್ಟೇಬಲ್ ಕಪಾಳಮೋಕ್ಷ ಮಾಡಿದ್ದೇಕೆ ಗೊತ್ತಾ..!?

Published

on

ಸುದ್ದಿದಿನ ಡೆಸ್ಕ್ : ನಟಿ ಕಂಗನಾ ರಾಣಾವತ್ ಗೆ ಸಿ ಐ ಎಸ್ ಎಫ್ (CISF) ಕಾನ್ಸ್ಟೇಬಲ್ ಕುಲ್ವಿಂದ‌ರ್ ಕೌ‌ರ್ ಎಂಬುವವರು ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.

ಸಿಐಎಸ್‌ಎಫ್‌ ಕಾನ್ಸೆಬಲ್ ಕುಲ್ವಿಂದ‌ರ್ ಕೌರ್ ಅವರು ದಿಲ್ಲಿಗೆ ವಿಮಾನವೇರಲು ಚಂಡೀಗಢ ವಿಮಾನ ನಿಲ್ದಾಣಕ್ಕೆ ಬಂದಾಗ ಙಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿಯ ಸಂಸದರಾಗಿ ಆಯ್ಕೆಯಾಗಿರುವ ಕಂಗನಾ ರಾಣಾವತ್ ಆರೋಪಿಸಿದ್ದರು.

“ರೈತರು 100 ರೂ. ಗಾಗಿ ಕುಳಿತಿದ್ದಾರೆ ಎಂದು ಪ್ರತಿಭಟನಾ ನಿರತ ರೈತರ ಬಗ್ಗೆ ಕಂಗನಾ ರಾಣಾವತ್ ಹೇಳಿಕೆ ನೀಡಿದ್ದರು” ಎಂದು, ಕಂಗನಾ ರಾಣಾವತ್ ಗೆ ಕಪಾಳಮೋಕ್ಷ ಮಾಡಿದ CISF ಕಾನ್ಸ್ಟೇಬಲ್ ಕುಲ್ವಿಂದ‌ರ್ ಕೌ‌ರ್ ಹೇಳಿದ್ದಾರೆ.

“ಕಂಗನಾ ಕೀಳುಮಟ್ಟದ ಹೇಳಿಕೆ ನೀಡಿದಾಗ ನಡೆಯುತ್ತಿದ್ದ ರೈತರ ಪ್ರತಿಭಟನೆಯಲ್ಲಿ ನನ್ನ ತಾಯಿಯೂ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು. ರೈತರು 100 ರೂ. ಗಾಗಿ ಕುಳಿತಿದ್ದಾರೆ ಎಂದು ಹೇಳಿಕೆ ನೀಡಿದ ಆಕೆ ಅಲ್ಲಿಗೆ ಹೋಗಿ ಕುಳಿತುಕೊಳ್ಳುತ್ತಾರಾ?” ಎಂದು ಕುಲ್ವಿಂದರ್ ಕೌರ್ ಪ್ರಶ್ನಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version