ಸಿನಿ ಸುದ್ದಿ

ದರ್ಶನ್ ಗೆ ಅಪಘಾತ: ಅಂಬಿ, ಶಿವಣ್ಣ ಹೇಳಿದ್ದೇನು ಗೊತ್ತಾ?

Published

on

ಸುದ್ದಿದಿನ ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಪಘಾತ ಆಗಿರುವ ಹಿನ್ನೆಲೆಯಲ್ಲಿ ಚಿತ್ರರಂಗದ ಹಿರಿಯ ನಟರಾದ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಮಾತನಾಡಿ, ಈಗಿನ ಕಾಲದ ಯುವಕರಿಗೆ ಜೋಶ್ ಹೆಚ್ಚಿರುವ ಕಾರಣ ದುಬಾರಿ ಕಾರು ಖರೀದಿಸುತ್ತಾರೆ. ಅಂತಹ ಕಾರುಗಳನ್ನು ಹಗಲಿನಲ್ಲಿ ಚಲಾಯಿಸಲು ಸಾಧ್ಯವಿರುವುದಿಲ್ಲ. ಹಾಗಾಗಿ ರಾತ್ರಿ ವೇಳೆ ಚಲಾಯಿಸುವ ಹುಮ್ಮಸ್ಸು ತೋರುತ್ತಾರೆ. ಆದರೆ ನನ್ನ ಪ್ರಕಾರ ಅಂತಹ ಕಾರುಗಳನ್ನು ಖರೀದಿಸುವುದೇ ತಪ್ಪು ಎಂದು ಹೇಳಿದ್ದಾರೆ.

ದರ್ಶನ್ ಆರೋಗ್ಯವಾಗಿದ್ದಾರೆ: ಶಿವಣ್ಣ

ನಟ ದರ್ಶನ್ ಅಪಘಾತಕ್ಕೆ ಈಡಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಅವರು ಇಂದು ಮೈಸೂರಿಗೆ ಭೇಟಿ ನೀಡಿ ದರ್ಶನ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ದರ್ಶನ್ ಆರೋಗ್ಯವಾಗಿದ್ದಾರೆ. ಇನ್ನು ಎರಡು ದಿನಗಳ ಒಳಗೆ ಡಿಶ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದರು.

Trending

Exit mobile version