ದಿನದ ಸುದ್ದಿ

ಕನ್ನಡ ಅಧಿನಿಯಮ ಜಾರಿಗೆ ವಿಳಂಬ : ಜ್ಞಾನ್ ಮಧು ಕಲ್ಲಹಳ್ಳಿ

Published

on

  • ವರದಿ: ಶಿವರಾಜ್ ಮೋತಿ

ಸುದ್ದಿದಿನ,ಬೆಂಗಳೂರು: ರಾಜ್ಯ ಸರ್ಕಾರವು “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ” ಅಂದರೆ “ಕನ್ನಡ ಕಾಯಿದೆ” ಈಗಾಗಲೇ ಅನುಮೋದನೆ ಆಗಿದ್ದು 2023 ರಲ್ಲಿ. ಈಗ ಹೊಸ ಸರ್ಕಾರ ರಚನೆಯಾಗಿ ಒಂದು ವರ್ಷ ತುಂಬಿದರೂ ಈ ಅಧಿನಿಯಮ ಜಾರಿ ಮಾಡುವ ಪ್ರಾಧಿಕಾರಗಳು, ಆಯೋಗಗಳು, ನಿರ್ದೇಶನಾಲಯಗಳ ರಚನೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಸರ್ಕಾರವು ಮಾರ್ಚ್ 12 , 2024 ರಿಂದ ಈ ಅಧಿನಿಯಮ ಜಾರಿಯಲ್ಲಿದೆ ಎಂದು ರಾಜ್ಯಪತ್ರ ಹೊರಡಿಸಿ ಸುಮ್ಮನಾಗಿ ಬಿಟ್ಟಿದೆ. ಈ ಅಧಿನಿಯಮ ಜಾರಿಯಾಗಲು ಆದಷ್ಟು ಬೇಗ ಪ್ರಾಧಿಕಾರಗಳು, ನಿರ್ದೇಶನಾಲಯ, ಭಾಷಾ ಆಯೋಗಗಳು ರಚನೆಯಾಗಬೇಕೆಂದು ಕನ್ನಡ ಪರ ವಿಚಾರವಂತರು, ಹೋರಾಟಗಾರರೂ ಆದ ಜ್ಞಾನ್ ಮಧು ಕಲ್ಲಹಳ್ಳಿ ತಿಳಿಸಿದರು.

ಅತಿ ತುರ್ತಾಗಿ ಈ ಆಡಳಿತ ವ್ಯವಸ್ಥೆ ಮುಗಿಸಲು ಮತ್ತು ಈ ಅಧಿನಿಯಮದ ಪರಿಣಾಮಕಾರಿ ಅನುಷ್ಠಾನ ಬೇಗ ಆಗಲೆಂದು ಸರ್ಕಾರಕ್ಕೆ ಖುದ್ದಾಗಿ ಒತ್ತಡ ಹೇರಿ ಕನ್ನಡ ಎಲ್ಲೆಡೆ ಬರುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ ಜೊತೆಗೆ ಈ ವಿಳಂಬವು ಸಾಕಷ್ಟು ಕನ್ನಡ ಅಭಿವೃದ್ದಿಗೆ ಈಗಾಗಲೇ ಹಿನ್ನೆಡೆಯಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಕೆಲಸ ಎಲ್ಲ ಕೆಲಸಗಳಿಗಿಂತ ಮೊದಲ ಆದ್ಯತೆಯಾಗಿರಬೇಕೆಂದು ಈ ಮೂಲಕ ಮನವರಿಕೆ ಮಾಡಿಕೊಡಲು ಇಚ್ಛಿಸುತ್ತೇನೆಂದು ಹಲ್ಮಿಡಿ ಕೂಟದ ಸಂಸ್ಥಾಪಕರಾದ ಪ್ರಾದೇಶಿಕವಾದಿ ಜ್ಞಾನ್ ಮಧು ಕಲ್ಲಹಳ್ಳಿ(ಜ್ಞಾನೇಶ್ವರ್) ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ “ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಅಧಿನಿಯಮ” ಮಾಡಬೇಕಾದ ತಿದ್ದುಪಡಿಯ ವಿಸ್ತೃತವಾದ ವರದಿಯನ್ನು ಸಲ್ಲಿಸಿ ಹಾಗೆಯೇ ನಾನು ಈ ಹಿಂದಿನ ಸರ್ಕಾರದಲ್ಲಿ ಪ್ರಸ್ತಾಪ ಮಾಡಿ ಕೊನೆಯ ಹಂತಕ್ಕೆ ತಲುಪಿರುವ ಕನ್ನಡ ಯೋಜನೆಗಳ ಬಗ್ಗೆ ಭೇಟಿಯಾಗಿ ವಿಸ್ತೃತವಾಗಿ ಚರ್ಚಿಸಿ ವಿಷಯಗಳನ್ನು ಹಂಚಿಕೊಂಡು ಕನ್ನಡದ ಕಾರ್ಯಗಳು ಆದಷ್ಟು ಬಹುಬೇಗನೇ ಪೂರ್ಣವಾಗಲೆಂದು ಮನವಿಕೊಟ್ಟು ಬಂದಿದ್ದೇನೆಂದು ತಿಳಿಸಿದರು. (ವರದಿ: ಶಿವರಾಜ್ ಮೋತಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version