/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ವಿಡಿಯೋ | ಭಟ್ರ ‘ಶೃಂಗಾರದ ಹೊಂಗೆ ಮರ’ ‘ಹೂ ಬಿಟ್ಟಿದೆ’ ಹಾಡಿಗೆ ಎದೆ ಬೆಚ್ಚಗೆ ಮಾಡಿಕೊಂಡ್ರು ಪಡ್ಡೆಗಳು..!

Published

on

ಸುದ್ದಿದಿನ ಡೆಸ್ಕ್ : ನಿರ್ದೇಶಕ ಯೋಗರಾಜ್ ಭಟ್ ಅವರ ನಿರ್ದೇಶನದ ‘ಪಂಚತಂತ್ರ’ ಸಿನೆಮಾದ ಟೀಸರ್ ಇತ್ತೀಚೆಗಷ್ಟೆ ರಿಲೀಸ್ ಆಗಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಯೂಟ್ಯೂಬ್ ನಲ್ಲಿ ಟೀಸರ್ ದೂಳೆಬ್ಬಿಸಿತ್ತು ಕೂಡಾ.

ಈ ಸಿನೆಮಾವು ಹಲವು ವಿಶೇಷಗಳನ್ನು ಹೊಂದಿದ್ದು, ಹಾಡುಗಳು ಸದ್ದು ಮಾಡಲು ತಯಾರಾಗಿವೆ. ಅಂದಹಾಗೆ ಭಟ್ಟರ ಸಾಹಿತ್ಯ ಹಾಗೂ ವಿ.ಹರಿಕೃಷ್ಣ ಅವರ ಸಂಗೀತದ ಮ್ಯಾಜಿಕ್ ನಲ್ಲಿ ಯುವ ಹೃದಯಗಳನ್ನು ಮೋಡಿ ಮಾಡಲು ಬಂದಿದೆ,’ಶೃಗಾರದ ಹೊಂಗೆ ಮರ’ ಎಂಬ ಶೃಂಗಾರ ಭರಿತ ಗೀತೆಯನ್ನು ಕ್ರಿಸ್ ಮಸ್ ಹಬ್ಬದ ಉಡುಗೊರೆಯಾಗಿ ಕೊಟ್ಟಿದ್ದಾರೆ.

ಬೆಳಗ್ಗೆ ಹತ್ತು ಮೂವತ್ತಕ್ಕೆ ಲಾಂಚ್ ಮಾಡಿದ ಈ ಲಿರಿಕಲ್ ವೀಡಿಯೋ ಯುವ ಹೃದಯಗಳಿಗೆ ಈ ಚಳಿಗಾಲದಲಿ ಮನಸು ಬೆಚ್ಚಗೆ ಮಾಡಲಿ ಎನ್ನುತ್ತಾ ಭಟ್ಟರು ತಮ್ಮ ನಗೆ ಚಟಾಕಿಯನ್ನು ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಹಾಡು ಕೂಡಾ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು ಚುಮುಚುಮುಚಳಿಯಲಿ ಪಡ್ಡೆಗಳ ಹೃದಯವನ್ನ ಬಿಸಿಮಾಡುತ್ತಿದೆ.

ಹಾಡು ನೋಡಿ ಎಂಜಾಯ್ ಮಾಡಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version