ಸಿನಿ ಸುದ್ದಿ

ಹಳೆ ಬೇರು ; ಹೊಸ ಚಿಗುರುಗಳ ನಡುವಿನ ಜಿದ್ದಾಜಿದ್ದಿ ‘ಪಂಚತಂತ್ರ’ ಟೀಸರ್ ರಲೀಸ್ : ಟೀಸರ್ ನೋಡಿ..!

Published

on

ಸಂವೇದನಾಶೀಲ ನಿರ್ದೇಶಕ ಯೋಗರಾಜ್ ಭಟ್ ಅವರ ಬಹುನಿರೀಕ್ಷಿತ ಸಿನೆಮಾ ‘ಪಂಚತಂತ್ರ’ ದ ಟೀಸರ್ ರಿಲೀಸ್ ಆಗಿದೆ. ವಿಜಯಕರ್ನಾಟ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ವಿಜಯಕರ್ನಾಟಕದ ಲವಲವಿಕೆ ವಿಭಾಗದ ಶ್ರೀವತ್ಸ ನಾಡಿಗ್ ಅವರು ಟೀಸರ್ ರಿಲೀಸ್ ಮಾಡಿದರು.

ಪಂಚತಂತ್ರ ಒಂದು ಹಿರಿಯರ – ಎಳೆಯರ ನಡುವಿನ ಜಿದ್ದಾಜಿದ್ದಿಯ ರೇಸ್ ನಿಂದ ಕೂಡಿರುವ ಒಂದು ವಿಶೇಷವಾದ ಸಿನೆಮಾ ಎಂದು ಯೋಗರಾಜ್ ಭಟ್ ಹೇಳಿದರು.ಟಗರು ಮಾಸ್ತಿ ಹಾಗೂ ಕಾಂತಪ್ಪ ಅವರ ಕತೆಯುಳ್ಳ ಈ ಸಿನೆಮಾಗೆ ಜೀವತುಂಬಿದ್ದಾರಂತೆ ಯೋಗರಾಜ್ ಭಟ್.

ರಿಯಲ್ ರೇಸ್ ನ ಬೆಚ್ಚಿಬೀಳಿಸೋ‌ ದೃಶ್ಯಗಳನ್ನ ಈ ಸಿನೆಮಾದಲ್ಲಿ ನೋಡಬಹುದು. ಹಾಗೂ ಸ್ಪೋರ್ಟ್ಸ್ ಕೆಟಗರಿಯ ಭಾರತದ ಸಿನೆಮಾರಂಗದಲ್ಲೇ ಇದುವರೆಗೆ ಮಾಡಿರದ ಒಂದು ವಿಶಿಷ್ಠವಾದದ್ದು ಈ ಸಿನೆಮಾ ಎಂದು ಯೋಗರಾಜ್ ಭಟ್ ಅನಿಸಿಕೆ ಹಂಚಿಕೊಂಡರು.

ಸಿನೆಮಾದಲ್ಲಿ ವಿಹಾನ್ ಮತ್ತು ಸೋನಾಲ್ ನಾಯಕ-ನಾಯಕಿಯಾಗಿ ಅಭಿನಯಿಸಿದ್ದು, ರಂಗಾಯಣ ರಘು, ಕರಿಸುಬ್ಬು ಸೇರಿದಂತೆ ಹಲವು ಕಲಾವಿದರು ಸಿನೆಮಾದಲ್ಲಿ ನಟಿಸಿದ್ದಾರೆ. ಸಿನೆಮಾಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version