ರಾಜಕೀಯ
ಮಾಜಿ ಸಂಸದೆ ರಮ್ಯಾ ಬಗ್ಗೆ ಅವರ ತಾಯಿ ಏನು ಹೇಳಿದ್ದಾರೆ ಗೊತ್ತಾ ?
ಸುದ್ದಿದಿನ ಡೆಸ್ಕ್: ಮಾಜಿ ಸಂಸದೆ, ನಟಿ ರಮ್ಯಾ ಕುರಿತು ಅವರ ತಾಯಿ ರಂಜಿತಾ ಕುತೂಹಲಕಾರಿ ಅಂಶ ಹೇಳಿದ್ದಾರೆ.
ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ರಂಜಿತಾ ಅವರು ಈಗ ಮಗಳು ರಮ್ಯಾ ಪರ ಬ್ಯಾಟಿಂಗ್ ಮಾಡಿದ್ದಾರೆ.
ಲೋಕಸಭೆ ಚುನಾವಣೆಗೆ ನನ್ನ ಪುತ್ರಿ ರಮ್ಯಾ ಮಂಡ್ಯದಿಂದಲೇ ಸ್ಪರ್ಧಿಸಲಿದ್ದಾಳೆ ಎಂದಿದ್ದಾರೆ.
ಪಕ್ಷದ ಚಟುವಟಿಕೆಗಳಲ್ಲಿ ನಿರತರಾಗಿರುವ ಕಾರಣ ಮಾಜಿ ಸಂಸದೆ ರಮ್ಯಾ ಜಿಲ್ಲೆಗೆ ಬಂದಿಲ್ಲ. ಆದರೆ ವಾಟ್ಸಪ್ ಹಾಗೂ ಫೋನ್ ಎಲ್ಲರ ಜೊತೆ ಸಂಪರ್ಕದಲ್ಲಿದ್ದು, ಶೀಘ್ರವೇ ಜಿಲ್ಲೆಗೆ ಆಗಮಿಸಲಿದ್ದಾಳೆ.
ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತೆ ನನಗೆ ಸೂಚಿಸಿರುವ ಕಾರಣ ನಾನು ಪ್ರಚಾರದಲ್ಲಿ ತೊಡಗಿದ್ದೇನೆ ಎಂದಿದ್ದಾರೆ.