ಸಿನಿ ಸುದ್ದಿ

ಕಿಚ್ಚನ ‘ಪೈಲ್ವಾನ್’ ಟೀಸರ್ ನಾಳೆ ರಿಲೀಸ್ ..!

Published

on

ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನೆಮಾ ‘ಪೈಲ್ವಾನ್’. ಈ ಸಿನೆಮಾಗಾಗಿ ಕಿಚ್ಚ ಜಿಮ್ ನಲ್ಲಿ ಕಸರತ್ತು ನಡೆಸಿ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ.

ಗಜಕೇಸರಿ, ಹೆಬ್ಬುಲಿ ಸಿನೆಮಾದ ನಿರ್ದೇಶಕ ಕೃಷ್ಣ ಪೈಲ್ವಾನ್ ಸಿನೆಮಾದ ನಿರ್ಮಾಣದ ಜೊತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಈಗಾಗಲೇ ಸಿನೆಮಾದ ಬಹುತೇಕ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡುತ್ತಿದೆ ಚಿತ್ರ ತಂಡ.

ಅಂದಹಾಗೆ ಈ ಸಿನೆಮಾದ ಟೀಸರ್ ಗಾಗಿ ಕಿಚ್ಚನ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಅಂದರೆ ನಾಳೆ ಮಂಗಳವಾರ ಸಂಜೆ ಈ ಸಿನೆಮಾದ ಟೀಸರ್ ಬಿಡುಗಡೆಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತಾಗಿ ನಿರ್ದೇಶಕ ಕೃಷ್ಣ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನೀವೂ ನೋಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version