ದಿನದ ಸುದ್ದಿ

ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಇನ್ನಿಲ್ಲ

Published

on

ಸುದ್ದಿದಿನ,ಬೆಂಗಳೂರು : ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ, ಜನಪ್ರಿಯ ಪ್ರಾಧ್ಯಾಪಕ, ಏಟ್ಸ್, ಎಲಿಯಟ್, ಷೇಕ್ಸ್ ಪಿಯರ್ ಕಾವ್ಯಗಳನ್ನು ಅನನ್ಯವಾಗಿ ಕನ್ನಡಕ್ಕೆ ತಂದ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ (85) ರು ಇಂದು ಈ ಮುಂಜಾನೆ 4.45ಗಂಟೆಗೆ ,ದೀರ್ಘ ಕಾಲದ ಅಸೌಖ್ಯದ ಕಾರಣ ವಿಧಿವಶರಾಗಿದ್ದಾರೆ.

ಬನಶಂಕರಿಯ ಕವಿಯ ಮನೆಯಲ್ಲಿ ಬೆಳಿಗ್ಗೆ ಹತ್ತು ಮೂವತ್ತರವರೆಗೆ ಅಂತಿಮ ದರ್ಶನ ಪಡೆಯಬಹುದು ಎಂದು ಕುಟುಂಬ ಮೂಲಗಳು ತಿಳಿಸಿವೆ‌.

ಎಲ್ಲರಿಗೂ ಸಲ್ಲುವ ಕವಿ ಎಂದೇ ಪ್ರಸಿದ್ಧರಾಗಿ, ಕನ್ನಡ ಭಾವಗೀತೆಗಳ ಲೋಕದಲ್ಲಿ ಅಮೂಲ್ಯ ಸಾಧನೆ ಮಾಡಿದ ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು. ಶಿವಮೊಗ್ಗದಲ್ಲಿ ಜನಿಸಿದ ಇವರು ನೀರ ಮೇಲಿನ ಲೀಲೆ, ನಿತ್ಯ ನಿತ್ಯ ಭೂಮಿ, ಮಾಗಿ ಕೊರೆವ ಬಾಳಿಗೆ ಮುಂತಾದ ಪ್ರಸಿದ್ಧ ಭಾವಗೀತೆಗಳನ್ನು ರಚಿಸಿದ್ದಾರೆ. ಪಾಂಚಾಲಿ, ಅರುಣಗೀತೆ, ಚಿತ್ರಕೂಟ, ದೀಪಿಕಾ, ಬಾರೋ ವಸಂತ ಇವರ ಕೆಲ ಕವನ ಸಂಕಲನಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.

ಇದನ್ನೂ ಓದಿ | ಕನ್ನಡವನ್ನ ಕಿತ್ತುಕೊಳ್ಳೋ ಧೈರ್ಯ ಯಾರಿಗಿದೆ..? ಕನ್ನಡ ಉಳಿಸಿ ಅನ್ನಬೇಡಿ, ಕನ್ನಡ ಬೆಳೆಸಿ ಎನ್ನಿ : ಕನ್ನಡ ಪರ ಹೋರಾಟಗಾರರಿಗೆ ಕಿಚ್ಚನ ಸಲಹೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version