ಲೈಫ್ ಸ್ಟೈಲ್

ಉಗುರುಗಳ ಮೇಲೂ ಕನ್ನಡದ ಕಂಪು💛❤

Published

on

ನವೆಂಬರ್ ಒಂದು  ಕನ್ನಡಿಗರೆಲ್ಲರೂ ಹೆಮ್ಮೆಯಿಂದ ಸಂಭ್ರಮಿಸುವ ದಿನ. ಕನ್ನಡ ರಾಜ್ಯೋತ್ಸವ ಕ್ಕೆ ದಿನಗಣನೆ ಶುರುವಾಗಿದ್ದು ಕನ್ನಡಿಗರ ನರ-ನಾಡಿಯಲ್ಲಿ ಸದಾ ಜಿನುಗುವ ಕನ್ನಡಾಭಿಮಾನ ದ ಪ್ರತೀಕ ವೆಂಬಂತೆ, ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಫ್ಯಾಷನ್ ಅಂಗಳದ ತುಂಬೆಲ್ಲಾ ಹಳದಿ-ಕೆಂಪಿನ ದ್ದೇ ದರಬಾರು.

ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. . ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಸಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ. ಇವೆರಡು ಮಂಗಳವನ್ನು  ಸೂಚಿಸುತ್ತದೆ.

ಕೈ ಉಗುರುಗಳಿಗೆ ಬಣ್ಣ ಬಣ್ಣದ ನೈಲ್ ಪಾಲಿಷ್ ಹಚ್ಚುವುದು ಸಾಮಾನ್ಯ. ಆದರೆ ನಮ್ಮ ಹೆಮ್ಮೆಯ  ಕನ್ನಡತಿಯರು ಒಂದು ಹೆಜ್ಜೆ ಮುಂದೆ ಹೋಗಿ ಕೈ ಉಗುರುಗಳ ಮೇಲೆ ಹಳದಿ-ಕೆಂಪು ಬಣ್ಣದ ಓಂಬ್ರೇ ನೈಲ್ ಆರ್ಟ್ ನೊಂದಿಗೆ ಕನ್ನಡಾಭಿಮಾನ ಮೆರೆದಾದ್ದಾರೆ.”ಕನ್ನಡ ನೈಲ್ ಆರ್ಟ್ ” ಈ ಬಾರಿಯ ಕನ್ನಡ ರಾಜ್ಯೋತ್ಸವದ  ವಿಶೇಷ ಕೊಡುಗೆಯಾಗಿದೆ. ಕನ್ನಡಾಂಬೆಯ ಬಾವುಟದ  ಹಳದಿ-ಕೆಂಪು ಬಣ್ಣಗಳ ಬಳಸಿ  ಹಲವಾರು ಹೊಸ ವಿನ್ಯಾಸದ ಉಗುರಿನ ಕಲೆ ಸೃಷ್ಟಿ ಆಗಿದೆ.

💛 ಸಿರಿಗನ್ನಡಂ  ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version