ದಿನದ ಸುದ್ದಿ
ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ: ನಟ ದರ್ಶನ್
ಸುದ್ದಿದಿನ ದಾವಣಗೆರೆ: ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಗೆ ವಿರುದ್ಧ ನಡೆಯುತ್ತಿರುವ ಅಭಿಯಾನಕ್ಕೆ ಕನ್ನಡದ ಸೂಪರ್ ಸ್ಟಾರ್ ನಟ ದರ್ಶನ್ ಟ್ವೀಟ್ ಮಾಡುವುದರ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ,
ಹಿಂದಿ ಹೇರಿಕೆ ಕಾಲಕ್ರಮೇಣ ಹೆಚ್ಚಾಗುತ್ತಲೇ ಇದೆ ಈಗಾಗಲೇ ಗಡಿಪ್ರದೇಶಗಳಲ್ಲಿ ಅನ್ಯಭಾಷೆಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ನಮ್ಮ ಕನ್ನಡಿಗರ ಅಸ್ತಿತ್ವವೇ ದೂರಾಗುವ ದಿನಗಳು ತುಂಬಾ ಹತ್ತಿರದಲ್ಲಿದೆ, ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ, ಕನ್ನಡಿಗರ ತೆರಿಗೆಯ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ ಎಂದರು.
ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳ ಮೇಲೆ ಬಲವಂತವಾಗಿ ಹೇರಲು ಹೊರಟಿರುವ ಹಿಂದಿ ಭಾಷೆಯ ಕುರಿತು ಕನ್ನಡ ಚಿತ್ರರಂಗದ ಅನೇಕ ನಟರು, ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿರುವುದು, ಈಗ ಹ್ಯಾಶ್ ಟ್ಯಾಗ್, ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
ನಾವು ಕನ್ನಡಿಗರು ಹಿಂದಿ ಕಲಿಯಲ್ಲ ಏನೀಗ? ಎಂಬ ಬರಹದ ಟಿ-ಶರ್ಟ್ ಧರಿಸುವ ಮೂಲಕ ಅಭಿಯಾನಕ್ಕೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಸಹ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿರುವ ಸಿನಿ ಕ್ಷೇತ್ರ ಹಿಂದಿ ದಿವಸ್ ಆಚರಣೆ ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತ ಮಾಡಿದರೆ ಒಳಿತು, ಉತ್ತರಭಾರತದ ಯಾವುದೋ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ನಮ್ಮ ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯ ಸ್ಥಿತಿ. ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ ನಮ್ಮ ಉಸಿರು ಇರುವವರೆಗೂ ಕನ್ನಡ ಪರವಾಗಿ ನಿಲ್ಲುತ್ತೇವೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಬಹುಭಾಷಾ ನಟ ಪ್ರಕಾಶ್ ರೈ ಹಿಂದಿ ಭಾಷೆ ಏರಿಕೆಯ ಕುರಿತಂತೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದು ಇವರೊಂದಿಗೆ ವೃಷಬ್ ಶೆಟ್ಟಿ, ಹಿಂದಿ ಹೇರಿಕೆ ವಿರೋಧಿಸಿ ಟ್ವೀಟ್ ಮಾಡಿ ಸುಳಿದಿತ್ತ ರಸಬಾಳೆ ಹಣ್ಣಿನಷ್ಟು ಸುಲಲಿತವಾದ ಭಾಷೆ ನಮ್ಮದೇ ಇರುವಾಗ ಅನ್ಯಭಾಷೆಯ ಅಗತ್ಯವಾದರೂ ಏನು.? ನಾವು ಕನಸು ಕಾಣುವ ಭಾಷೆ ನಮ್ಮ ನಾಲಿಗೆಯ ಮೇಲಿರಲಿ ಬಿಡಿ ಎಂದಿದ್ದಾರೆ.
ಹಿಂದಿ ಭಾಷೆಯ ಹೇರಿಕೆಯನ್ನು ವಿರೋಧಿಸಿ ನಟ ಜಯ ಧನಂಜಯ ಚೇತನ್ ದುನಿಯಾ ದುನಿಯಾ ವಿಜಯ್ ಮುಂತಾದ ನಟರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ
ವಾಟ್ಸಪ್: 8073105526