ದಿನದ ಸುದ್ದಿ

‘ದಾದಾಸಾಹೇಬ್ ಕಾನ್ಸಿರಾಂ ಜೀ’ ನುಡಿಮುತ್ತುಗಳು : ಮಿಸ್ ಮಾಡ್ದೆ ಓದಿ

Published

on

ಭಾರತದ ಬಹುಜನ ರಾಜಕಾರಣ ಕಟ್ಟಿ ಯಶಸ್ವಿಯಾದ ರಾಜಕೀಯ ಸಾಮಾಜಿಕ ವಿಜ್ಞಾನಿ ‘ದಾದಾಸಾಹೇಬ್ ಕಾನ್ಸಿರಾಂ ಜೀ’ ಅವರನ್ನು ‘ಪೊಲಿಟಿಕಲ್ ಲೆಜೆಂಡ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ. ರಾಜಕಾರಣ ಎಂದರೆ ನಮಗೆ ಬೇಡವೇ ಬೇಡ ಎನ್ನುವ ಅಸಮರ್ಥ ಅಸಹಾಯಕ ಸಮುದಾಯದ ಎದೆಯೊಳಗೆ ಅರಸೊತ್ತಿಗೆಯ ಕನಸು ಬಿತ್ತಿದ ಮಹಾನ್ ಚೇತನ ಕಾನ್ಸಿರಾಮ್ ಜಿ. ಅವರ ಕೆಲವು ನುಡಿಮುತ್ತುಗಳು ಹೀಗಿವೆ.

ದಾದಾಸಾಹೇಬ್ ಕಾನ್ಸಿರಾಂ ಜೀ ನುಡಿಮುತ್ತುಗಳು

  1. ದಲಿತರು ಸಹ ದೊರೆಗಳಾಗಲೇಬೇಕು ಅದು ಸರಳ ನಿಮ್ಮಗಳ ಕೈಗಳನ್ನು ಕೆಳಗೆ ಮಾಡಿ ಬೇಡುವ ಬದಲಾಗಿ ಕೈಗಳನ್ನು ಮೇಲೆ ಮಾಡಿ ನೀಡುವ ಕೈಗಳಾಗಿ ಪರಿವರ್ತನೆ ಮಾಡಿಕೊಳ್ಳುವ ಮುಖೇನ ಆಳುವ ನೀಡುವ ವರ್ಗವಾಗಿ ನಿಲ್ಲಬೇಕು.
  2. “ಗುಲಾಮ ಸಮಾಜವನ್ನು, ಆಳುವ ಸಮಾಜವನ್ನಾಗಿಮಾಡುವುದೇ ನನ್ನ ಗುರಿ”.
  3. “ಯಾವ ಸಮುದಾಯಕ್ಕೆ ಪುಕ್ಕಟೆ ತಿನ್ನುವ ಅಭ್ಯಾಸ ಆಗಿದಿಯೋ ಆ ಜಾತಿ ಎಂದು ಬದಲಾವಣೆ ಬಯಸಲಾರದು ಮತ್ತು ಕ್ರಾಂತಿ ಮಾಡಲಾರದು.ಯಾವ ಸಮುದಾಯ ಕ್ರಾಂತಿ ಮಾಡುವುದಿಲ್ಲವೊ ಆ ಸಮುದಾಯ ಎಂದು ದೇಶ ಆಳಲಾರದು.ಯಾವ ಸಮುದಾಯ ದೇಶ ಆಳುವುದಿಲ್ಲವೋ ಅವರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಮತ್ತು ಹೆಣ್ಣುಮಕ್ಕಳು ಸುರಕ್ಷಿತರಾಗಿ ಇರಲಾರರು ಮತ್ತು ಅವರೆಂದೂ ನ್ಯಾಯ ಪಡೆಯಲಾರರು”.
  4. “ನನಗೆ ದಲಿತ ಚಳುವಳಿಯಲ್ಲಿ ಆಸಕ್ತಿ ಇಲ್ಲ, ರಾಜ್ಯಾಧಿಕಾರದ ಹೋರಾಟದಲ್ಲಿ ಅತೀವವಾದ ಆಸಕ್ತಿಯಿದೆ.
  5. ನಾವು ಜಾತಿಯನ್ನು ಅಲಕ್ಷ್ಯಿಸಲಿಲ್ಲ. ಜಾತಿಯನ್ನು ಗಣನೆಗೆ ತೆಗೆದುಕೊಂಡು, ಅದನ್ನು ಲಾಭಕರವಾಗಿ ನಿಭಾಯಿಸಲು ಕಲೆತವು.
  6. ಚಳುವಳಿಯನ್ನು ಮುನ್ನಡೆಸದಿರುವುದು ಹೇಗೆ ಎಂಬುದನ್ನು ತಿಳಿಯದು ಹೊರತು,ಚಳುವಳಿಯನ್ನು ಮುನ್ನೆಡೆಸುವುದು ಹೇಗೆ ಎಂಬುದನ್ನು ತಿಳಿಯಲು ಸಾದ್ಯವಿಲ್ಲ.
  7. ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version