ದಿನದ ಸುದ್ದಿ
ಕಾರ್ಗಿಲ್ ವಿಜಯ ದಿನ: ಹುತಾತ್ಮ ಯೋಧರಿಗೆ ನಮನ ಸಲ್ಲಿದ ಸಿದ್ದು
ಸುದ್ದಿದಿನ ಡೆಸ್ಕ್: ಕಾರ್ಗಿಲ್ ವಿಜಯ ದಿನದ ಅಂಗವಾಗಿ ಕಾರ್ಗಿಲ್ ಯುದ್ಧ ದೇಶಕ್ಕಾಗಿ ಬಲಿದಾನ ಮಾಡಿದ ಭಾರತೀಯ ಯೋಧರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ ಸಲ್ಲಿಸಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಕರೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ದೇಶದ ರಕ್ಷಣೆ ಹೋರಾಡಿದ ಯೋಧರಿಗೆ ನಮನ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ದೇಶಕ್ಕಾಗಿ ನೀವು ಮಾಡಿದ ಬಲಿದಾನ ಮತ್ತು ತ್ಯಾಗ ನಮ್ಮ ಹೃದಯದಲ್ಲಿ ಎಂದಿಗೂ ಮನೆ ಮಾಡಿರುತ್ತವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
https://twitter.com/siddaramaiah/status/1022357221827436544