ರಾಜಕೀಯ
ಸ್ನೇಹದ ಹಸ್ತ ತಿರಸ್ಕರಿಸಿದ್ದ ಪಾಕಿಸ್ತಾನಕ್ಕೆ ಕಾರ್ಗಿಲ್ ನಲ್ಲಿ ತಕ್ಕ ಉತ್ತರ ನೀಡಿದ್ದ ಅಜಾತಶತ್ರು !
ಸುದ್ದಿದಿನ ವಿಶೇಷ: ಅದು 1999 ನೇ ವರ್ಷ. ಭಾರತದ ಶಕ್ತಿ ಜಗತ್ತಿಗೆ ಪರಿಚಯವಾದ ವರ್ಷ. ಗಡಿಯಲ್ಲಿ ಅನಗತ್ಯ ಕಿರುಕುಳ ನೀಡುತ್ತಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ದಿನಗಳು ಅವು. ಇದಕ್ಕೆಲ್ಲ ಕಾರಣವಾಗಿದ್ದು, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜಾಣ್ಮೆ ಹಾಗೂ ಸೂಕ್ತ ನಿರ್ಧಾರ.
ಹೌದು, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನದ ಸೈನಿಕರು ನುಸುಳುವ ಪ್ರಯತ್ನ ಮುಂದುವರಿಸಿದ್ದರು. 1999ರಲ್ಲಿ ಪಾಕಿಸ್ತಾನದ ಸೈನಿಕರು ಕಾಶ್ಮೀರ ಕಣಿವೆಗಳ ಮುಖಾಂತರ ದೇಶದ ಒಳಗೆ ನುಸುಳುವುದು ಹೆಚ್ಚಾಯಿತು. ಇದರಿಂದಾಗಿ ಯುದ್ಧ ಘೋಷಿಸಿಸುವ ಅನಿವಾರ್ಯತೆ ಭಾರತಕ್ಕೆ ಎದುರಾಯಿತು.
ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮbಚಾಣಾಕ್ಷತನದಿಂದ ಯುದ್ಧಕ್ಕೆ ಸಿದ್ಧತೆ ನಡೆಸಿದರು ಇಡೀ ದೇಶ ಪ್ರಧಾನಿ ಬಿನ್ನಿಗೆ ನಿಂತಿತು. ಅದರ ಫಲವಾಗಿ ನಮ್ಮ ದೇಶದ ಸೈನಿಕರು ವಿರೋಚಿತವಾಗಿ ಹೋರಾಟ ನಡೆಸಿದ ವಿಜಯದ ಮಾಲೆ ಧರಿಸಿದರು. ಇದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಸಮಯೋಚಿತ ನಿರ್ಧಾರ ಕಾರಣವಾಯಿತು.
ಸ್ನೇಹದ ಹಸ್ತ ಚಾಚಿದ್ದ ಅಜಾತಶತ್ರು !
ಯುದ್ದಕ್ಕೂ ಮೊದಲು ಪಾಕಿಸ್ತಾನದ ಜತೆ ಸ್ನೇಹಕ್ಕೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸ್ನೇಹದ ಹಸ್ತ ಚಾಚಿದ್ದರು. ಆದರೆ ಪಾಕಿಸ್ತಾನ ಅದನ್ನು ಅರ್ಥ ಮಾಡಿಕೊಳ್ಳದೇ ತನ್ನ ಪ್ರವೃತ್ತಿ ಮುಂದುವೆರಿಸಿತ್ತು. ಕೊನೆಗೆ ಯುದ್ಧಕ್ಕೆ ಮುಂದಾಗಲಾಯಿತು. ಕೊನೆಗೆ ಯುದ್ದದಲ್ಲಿ ಸೋತ ಪಾಕಿಸ್ತಾನ ಭಾರತದ ಮೇಲೆ ಅಣುಬಾಂಬ್ ಹಾಕುವ ಬೆದರಿಕೆ ಹಾಕಿತು. ಇದಕ್ಕೆ ಭಾರತ ಸೊಪ್ಪು ಹಾಕಲಿಲ್ಲ. ಅಮೆರಿಕ, ಚೀನಾ ದೇಶಗಳು ಕೂಡ ಪಾಕಿಸ್ತಾನಕ್ಕೆ ಮಾನ್ಯತೆ ನೀಡಲಿಲ್ಲ. ಸ್ವಾಭಿಮಾನದ ಮೂಲಕ ಯುದ್ಧ ಗೆದ್ದ ಭಾರತ ತನ್ನ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಿತು. ಇದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ಕೈಗೊಂಡ ನಿರ್ಧಾರ ಕಾರಣವಾಯಿತು ಎಂದು ಸ್ಮರಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್ |9986715401