ರಾಜಕೀಯ
ಸಿದ್ದು ಯೋಜನೆಗಳಿಗಿಲ್ಲ ಕುತ್ತು; ಇದು ಕುಮಾರಸ್ವಾಮಿ ಬಜೆಟ್ ಕರಾಮತ್ತು !!
ಸುದ್ದಿದಿನ ವಿಶೇಷ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾದ ಜನಪ್ರಿಯ ಯೋಜನೆಗಳಿಗೆ ಹೊಸ ಬಜೆಟ್ ನಲ್ಲಿ ಕತ್ತರಿ ಬೀಳುತ್ತದೆ ಎಂಬ ಆತಂಕದಿಂದ ಉಭಯ ನಾಯಕರಲ್ಲಿ ಹಗ್ಗಜಗ್ಗಾಟ ನಡೆದಿತ್ತು. ನಂತರ ಎರಡು ಪಕ್ಷದ ನಾಯಕರ ನಡುವೆ ನಡೆದ ಸಮನ್ವಯ ಸಂಧಾನದಲ್ಲಿ ಹಿಂದಿನ ಯೋಜನೆಗಳಿಗೆ ತೊಡಕಾಗಬಾರದು ಎಂದು ಹೇಳಲಾಗಿತ್ತು. ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ಯಾವುದೇ ಯೋಜನೆಗಳಿಗೆ ಕತ್ತರಿ ಹಾಕದೇ ತಮ್ಮ ಚೊಚ್ಚಲ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ.
ಈ ಬಜೆಟ್ ನಲ್ಲಿ ರೈತರ ಸಾಲಮನ್ನಾ ಸೇರಿದಂತೆ ಅನೇಕ ಜನಪ್ರಿಯ ಯೋಜನೆ ಜಾರಿಗೊಳಿಸಿದ್ದಾರೆ. ಪ್ರಮುಖವಾಗಿ ಇಸ್ರೇಲ್ ಮಾದರಿ ಕೃಷಿ ಪದ್ಧತಿಗೆ ಕೋಟ್ಯಂತರ ಹಣ ಮೀಸಲಿಟ್ಟಿದ್ದು, ಅದಕ್ಕೆ ಚಿತ್ರದುರ್ಗ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.