ದಿನದ ಸುದ್ದಿ

ಕರ್ನಾಟಕ ಕಾಲೇಜಿನ ಕೌನ್ಸಲಿಂಗ್ ಬಹಿಷ್ಕರಿಸಿ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟದ ಎಚ್ಚರಿಕೆ : ಮುತ್ತಪ್ಪ ಎಸ್ ಆಕ್ರೋಶ

Published

on

ಸುದ್ದಿದಿನ,ಧಾರವಾಡ: ಕರ್ನಾಟಕ ಕಾಲೇಜಿನ ಪ್ರವೇಶ ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳ ಸಂಘದ ರಾಜ್ಯಾಧ್ಯಕ್ಷ ಮುತ್ತಪ್ಪ ಎಸ್ ಆಕ್ರೋಶ ಹೊರ ಹಾಕಿದರು.

ಮಹಾವಿದ್ಯಾಲಯದ ಆವರಣದಲ್ಲಿ ಪ್ರತಿಭಟನಾ ನಿರತರಾಗಿ, ಕರ್ನಾಟಕ ಮಹಾವಿದ್ಯಾಲಯ ಹೆಚ್ಚುವರಿ ಶುಲ್ಕ ಹೆಸರಿನಲ್ಲಿ ಹಗಲು ದರೋಡೆ, ಎಸ್‌ಸಿ-ಎಸ್‌ಟಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಕೋಟಾದಡಿಯಲ್ಲಿ ತುಂಬಾ ಅವ್ಯವಹಾರವಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಬಡವರ ಮಕ್ಕಳ ವಸೂಲಿ ಮಾಡುವ ಮೂಲಕ ಕೆಸಿಡಿ ಹಗಲು ದರೋಡೆ ಮಾಡುತ್ತಿದೆ. ಸಿಬ್ಬಂದಿಯೂ ಸಹ ಸರಿಯಾದ ಸ್ಪಂದನೆ ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ. ನಾವು ಬಂದರೂ ನಿಖರವಾದ ಪ್ರವೇಶಾತಿಗಳ ಮಾಹಿತಿ ನೀಡದೇ ಇಲ್ಲಿನ ಆಡಳಿತ ಮಂಡಳಿಯು ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ.

ಈ ಸಮಸ್ಯೆ ಬಗೆಹರಿದು ರೋಸ್ಟರ್ ಪದ್ಧತಿಯ ಅನುಸರಿಸಿ ಎಸ್‌ಸಿ-ಎಸ್‌ಟಿ ಹಾಗೂ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡದಿದ್ದರೆ ಉಗ್ರವಾಗಿ ಬಹುಸಂಖ್ಯಾತ ವಿದ್ಯಾರ್ಥಿಗಳೊಂದಿಗೆ, ನಮ್ಮ ಸಂಘಟನೆಯ ವತಿಯಿಂದ ಕಾಲೇಜಿನ ಪ್ರಾಂಶುಪಾಲರ ಕಛೇರಿಯ ವಿರುದ್ಧ ದೊಡ್ಡ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯಾಧ್ಯಾಕ್ಷ ಮುತ್ತಪ್ಪ ಎಸ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಗಂಗಾಧರ್, ವಿಕ್ರಮ್, ಮಂಜು, ಮುತ್ತುರಾಜ್, ತರುಣ್ ಹಾಗೂ ಅಸಂಖ್ಯೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಇದ್ದರು.ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version