ದಿನದ ಸುದ್ದಿ
ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ದುರ್ಮರಣ
ಸುದ್ದಿದಿನ,ಬಾಗಲಕೋಟೆ : ಕಾಂಗ್ರೆಸ್ ನ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ(70) ಬಾಗಲಕೋಟೆಯ ತುಳಸಗೇರಿ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
ಗೋವಾಕ್ಕೆ ಹೊಗಿದ್ದ ಅವರು ಮರಳಿ ಬಾಗಲಕೋಟೆಗೆ ಬರುತ್ತಿದ್ದಾಗ ಟೈರ್ ಸ್ಪೋಟಗೊಂಡ ಪರಿಣಾಮ,ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಿನ ಮುಂಬಾಗ ಜಖಂಗೊಂಡಿದ್ದು ಕಾರಿನಲ್ಲಿದ್ದ ಇತರರು ಪಾರಾಗಿದ್ದಾರೆ.
ಕಾರಿನ ಮುಭಾಗದಲ್ಲಿಯೇ ಕೂತಿದ್ದ ಶಾಸಕರು ಅಪಘಾತದಿಂದ ಅವರ ಎದೆ ತೀವ್ರವಾದ ಹೊಡೆತ ಬಿದ್ದಿತ್ತು.ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.