ದಿನದ ಸುದ್ದಿ

ರಾಜ್ಯದಲ್ಲಿಂದು 308 ಮಂದಿಗೆ ಕೊರೋನಾ

Published

on

ಸುದ್ದಿದಿನ,ಬೆಂಗಳೂರು: ಶನಿವಾರ 308 ಮಂದಿಗೆ ಕೊರೊನಾ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6,824ಕ್ಕೇರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಕಲಬುರಗಿಯಲ್ಲಿ 67 ಮತ್ತು ಯಾದಗಿರಿಯಲ್ಲಿ 52 ಪ್ರಕರಣಗಳು ಪತ್ತೆ ಆಗಿವೆ.

ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಬುಲೆಟಿನ್ ಪ್ರಕಾರ, ಇಂದು ಕಂಡು ಬಂದ 308 ಸೋಂಕಿತರ ಪೈಕಿ 208 ಜನರು ಅಂತರಾಜ್ಯ ಮತ್ತು 25 ಜನರು ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದಾರೆ. ಇವತ್ತು ಹೆಮ್ಮಾರಿ ಕೊರೊನಾ ಮೂವರನ್ನು ಬಲಿ ಪಡೆದುಕೊಂಡಿದೆ. 6824 ಪ್ರಕರಣಗಳಲ್ಲಿ 3092 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 3648 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version