ದಿನದ ಸುದ್ದಿ
ಮೈತ್ರಿ ಸರ್ಕಾರದಿಂದ ರೈತರಿಗೆ ವಿಜಯದಶಮಿ ಗಿಫ್ಟ್ ರೆಡಿಯಾಯ್ತು…!?
ಸುದ್ದಿದಿನ ಡೆಸ್ಕ್ | ಮೈತ್ರಿ ಸರ್ಕಾರ ರಾಜ್ಯದ ರೈತರಿಗೆ ವಿಜಯದಶಮಿಯ ಗಿಫ್ಟ್ ಕೊಡಲು ಸಕಲ ತಯಾರಿ ನಡೆಸಿದೆ. ಅಂತಹದೊಂದು ಸುಳಿವನ್ನ ಎಚ್.ಡಿ.ರೇವಣ್ಣ ಇಂದು ಬಿಟ್ಟುಕೊಟ್ಟಿದ್ದಾರೆ.
ರಾಷ್ಟ್ರೀಕೃತ ಮೂಲಗಳ ಬ್ಯಾಂಕ್ ಗಳು ರೈತರ ಸಾಲಾಮನ್ನಾ ಪ್ರಕ್ರಿಯೆಯಲ್ಲಿ ಸಹಕರಿಸದಿದ್ದರೆ ಸರ್ಕಾರವೇ ಸಾಲಗಾರ ರೈತನ ಪ್ರತಿಯೊಂದು ಮಾಹಿತಿಯನ್ನು ಪಡೆದು ಆತನ ಸಾಲದ ಮೊತ್ತವನ್ನು ನಗದು ಅಥವಾ ಚೆಕ್ ಮೂಲಕ ನೀಡಿ ಬ್ಯಾಂಕ್ ಸಾಲಕ್ಕೆ ಪಾವತಿಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಈ ಹಣ ಪಡೆದ ರೈತ ಹಣವನ್ನು ದುರ್ಬಳಕೆ ಮಾಡಿಕೊಂಡರೆ ಅತನ ಮೇಲೆ ಕ್ರಮವನ್ನು ತೆಗೆದುಕೊಳ್ಳುವ ಪ್ರಕ್ರಿಯೆಯೂ ತಯಾರಿದೆ ಎಂದು ರೇವಣ್ಣ ಸುಳಿವು ಬಿಟ್ಟು ಕೊಟ್ಟಿದ್ದಾರೆ.
ಮೂರು ಹಂತಗಳಲ್ಲಿ ರೈತರ ಸಾಲಾಮನ್ನಾ ಪ್ರಕ್ರಿಯೆ ನಡೆಯಲಿದೆಯಂತೆ. ಅಂದ ಹಾಗೆ ಇನ್ನು ಕೇವಲ ಸರ್ಕಾರ ಅಧಿಕೃತವಾಗಿ ಇನ್ನೊಂದು ವಾರದಲ್ಲಿ ಈ ವಿಷಯದ ಕುರಿತು ಅಧಿಕೃತ ಪ್ರಕಟಣೆ ಹೊರಡಿಸುವುದೊಂದೇ ಬಾಕಿ ಉಳಿದಿದೆಯಷ್ಟೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401