ರಾಜಕೀಯ
ಶಿವಮೊಗ್ಗ ಮಹಾನಗರ ಪಾಲಿಕೆಯು ಬಿಜೆಪಿ ತೆಕ್ಕೆಗೆ, ತುಮಕೂರು ಪಾಲಿಕೆ ಅತಂತ್ರ
ಸುದ್ದಿದಿನ: ತುಮಕೂರು ಮಹಾನಗರ ಪಾಲಿಕೆ ಅತಂತ್ರಗೊಂಡಿದೆ. 35 ವಾರ್ಡ್‍ಗಳ ಪೈಕಿ ಜೆಡಿಎಸ್ 11, ಬಿಜೆಪಿ 12, ಕಾಂಗ್ರೆಸ್ 9 ಹಾಗೂ 3 ವಾರ್ಡ್?ಗಳಲ್ಲಿ ಇತರರು ಗೆಲವು ಸಾಧಿಸಿದ್ದಾರೆ.
ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು 18 ಸದಸ್ಯರ ಬೆಂಬಲ ಅಗತ್ಯವಿದೆ. ಇನ್ನು ಶಿವಮೊಗ್ಗ ಪಾಲಿಕೆಯು ಬಿಜೆಪಿ ತೆಕ್ಕೆಗೆ ಬಂದಿದ್ದು, 35 ವಾರ್ಡ್?ಗಳ ಪಾಲಿಕೆಯಲ್ಲಿ ಬಿಜೆಪಿ 20, ಕಾಂಗ್ರೆಸ್ 7, ಜೆಡಿಎಸ್ 1, ಎಸ್?ಡಿಪಿಐ 1 ಹಾಗೂ 5 ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಎಲ್ಲಿ ಅತಂತ್ರ ಮತ್ತು ಎಲ್ಲಿ ಸ್ವತಂತ್ರ !
- ಹುನಗುಂದ ಪುರಸಭೆ ಕಾಂಗ್ರೆಸ್ ತೆಕ್ಕೆಗೆ
- ರಾಯಚೂರು ನಗರಸಭೆ ಅತಂತ್ರ
- ಮಹಾಲಿಂಗಪುರ ಪುರಸಭೆ ಬಿಜೆಪಿ ಪಾಲು
- ಚಿಕ್ಕೋಡಿ ಪುರಸಭೆ ಬಿಜೆಪಿ ತೆಕ್ಕೆಗೆ
- ಗುಬ್ಬಿ ಪಟ್ಟಣ ಪಂಚಾಯಿತಿ ಜೆಡಿಎಸ್ ತೆಕ್ಕೆಗೆ
- ಕೊಪ್ಪಳ ನಗರಸಭೆ ಅತಂತ್ರ
- ಕುಷ್ಟಗಿ ಪುರಸಭೆ ಕಾಂಗ್ರೆಸ್ ಪಾಲು
- ಗಂಗಾವತಿ ನಗರಸಭೆ ಅತಂತ್ರರ
- ಕಾರ್ಕಳ ಪುರಸಭೆ ಫಲಿತಾಂಶ ಅತಂತ್ರ
- ಗುರುಮಠ್ಕಲ್ ಪುರಸಭೆ ಕಾಂಗ್ರೆಸ್ ತೆಕ್ಕೆಗೆ
- ಹಾವೇರಿ ನಗರಸಭೆ ಅತಂತ್ರ
- ಹಳಿಯಾಳ ಪುರಸಭೆ ಕಾಂಗ್ರೆಸ್ ಪಾಲು
- ಕೊಪ್ಪಳ ನಗರಸಭೆ ಫಲಿತಾಂಶ ಅತಂತ್ರ
- ಚಿಕ್ಕನಾಯಕನ ಹಳ್ಳಿ ಪುರಸಭೆ ಜೆಡಿಎಸ್? ವಶಕ್ಕೆ