ದಿನದ ಸುದ್ದಿ
ರಾಜ್ಯದ ಎಲ್ಲಾ ಸಚಿವರ ವರ್ಷದ ವೇತನವನ್ನು ಕೊರೋನಾ ಪರಿಹಾರ ನಿಧಿಗೆ ನೀಡಲು ಸರ್ಕಾರ ಆದೇಶ
ಸುದ್ದಿದಿನ,ಬೆಂಗಳೂರು : ರಾಜ್ಯದ ಎಲ್ಲಾ ಸಚಿವರ ಒಂದು ವರ್ಷದ ವೇತನವನ್ನು ಕೋವಿಡ್ -19 ಪರಿಹಾರ ನಿಧಿಗೆ ನೀಡುವಂತೆ ಕರ್ನಾಟಕ ಸರ್ಕಾರ ಗುರುವಾರ ಸೂಚಿಸಿ ಆಧಿಕೃತ ಆದೇಶ ಹೊರಡಿಸಿದೆ.
ವ್ಯಾಪಕವಾಗಿ ಹರಡಿರು ಕೊರೋನಾವನ್ನು ತಡೆಯಲು ಅನುಕೂಲವಾಗುವಂತೆ ರಾಜ್ಯ ಸಚಿವ ಸಂಪುಟದ ಎಲ್ಲಾ ಸಚಿವರ ಒಂದು ವರ್ಷದ ವೇತನ (ದಿನಾಂಕ:01-05-21 ರಿಂದ ಅನ್ವಯವಾಗುವಂತೆ) ಪರಿಹಾರ ನಿಧಿಗೆ ದೇಣಿಗೆ ಪಾವತಿಸಲು ಆದೇಶ ನೀಡಿದೆ.
ಮಾನ್ಯ ಮುಖ್ಯಮಂತ್ರಿ @BSYBJP ರವರ ಸೂಚನೆಯಂತೆ, ರಾಜ್ಯದ ಎಲ್ಲಾ ಸಚಿವರ ಒಂದು ವರ್ಷದ ವೇತನವನ್ನು (ದಿನಾಂಕ: 01.05.2021 ರಿಂದ ಅನ್ವಯವಾಗುವಂತೆ) ಕೋವಿಡ್-19 ಪರಿಹಾರ ನಿಧಿಗೆ ದೇಣಿಗೆಯಾಗಿ ಪಾವತಿಸಲು ಸರ್ಕಾರದ ಆದೇಶ ಹೊರಡಿಸಲಾಗಿದೆ.#KarnatakaFightsCorona pic.twitter.com/xMFE1URXQz
— CM of Karnataka (@CMofKarnataka) May 13, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243