ದಿನದ ಸುದ್ದಿ

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಉತ್ತಮ ಮತದಾನ; ಚಿಕ್ಕೋಡಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಹಕ್ಕು ಚಲಾವಣೆ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕದಲ್ಲಿ ನಿನ್ನೆ ಸುಗಮ ಮತದಾನವಾಗಿದ್ದು, ಶೇಕಡ 70.41ರಷ್ಟು ಮತದಾನವಾಗಿದೆ.

ಬಾಗಲಕೋಟೆಯಲ್ಲಿ ಶೇಕಡ 70.10 ರಷ್ಟು, ಬೆಳಗಾವಿಯಲ್ಲಿ ಶೇಕಡ 71.00, ಬಳ್ಳಾರಿ 72.35, ಬೀದರ್ 63.55, ಬಿಜಾಪುರ 64.71, ಚಿಕ್ಕೋಡಿ 76.47, ದಾವಣಗೆರೆ 76.23, ಧಾರವಾಡ 72.12, ಕಲಬುರಗಿಯಲ್ಲ್ಲಿ 61.73, ಹಾವೇರಿಯಲ್ಲಿ 75.75, ಕೊಪ್ಪಳ 69.87, ರಾಯಚೂರು 61.81, ಶಿವಮೊಗ್ಗ 76.05 ಹಾಗೂ ಉತ್ತರ ಕನ್ನಡದಲ್ಲಿ ಶೇಕಡ 73.52 ರಷ್ಟು ಮತದಾನವಾಗಿದೆ. ಚಿಕ್ಕೋಡಿಯಲ್ಲಿ ಅತಿಹೆಚ್ಚು ಹಾಗೂ ಕಲಬುರಗಿಯಲ್ಲಿ ಅತಿ ಕಡಿಮೆ ಮತದಾನವಾಗಿದೆ.

ಕರ್ನಾಟಕದ ಕರಾವಳಿ, ಮಲೆನಾಡು, ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಮತದಾನ ನಡೆಯಿತು. ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದ ಕಾರಣದಿಂದಾಗಿ ಸುರಪುರ ವಿಧಾನಸಭೆಗೂ ನಿನ್ನೆ ಉಪಚುನಾವಣೆ ನಡೆಯಿತು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ ಕಣದಲ್ಲಿದ್ದಾರೆ. ಕರ್ನಾಟಕದ ಸುರಪುರದಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಶೇಕಡ 73 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಂಕಿ-ಅಂಶಗಳು ತಿಳಿಸಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version