ರಾಜಕೀಯ
ಕೊನೆಗೂ ಖಾತೆ ಹಂಚಿದ ಯಡಿಯೂರಪ್ಪ: ಯಾವ ಖಾತೆ ಯಾರಿಗೆ..?
ಸುದ್ದಿದಿನ,ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿದ್ದಾರೆ. ಒಂದು ತಿಂಗಳ ಹಿಂದೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಕಡೆಗೂ ತಮ್ಮ ಸಚಿವರಿಗೆ ಇಂದು ಖಾತೆ ಹಂಚಿ ತಮ್ಮ ಬಳಿ ಇದ್ದ ಹೆಚ್ಚುವರಿ ಖಾತೆಗಳ ಜವಾಬ್ದಾರಿಯಿಂದ ಮುಕ್ತವಾಗಿದ್ದಾರೆ.
ಹೈಕಮಾಂಡ್ ಜೊತೆಗೆ ಸತತವಾಗಿ ತಮ್ಮ ಪಟ್ಟಿ ಹಾಗೂ ಆರ್ ಎಸ್ ಎಸ್ ಪಟ್ಟಿಯ ನಡುವೆ ಸಮತೋಲನ ಸಾಧಿಸಿರುವ ಯಡಿಯೂರಪ್ಪ ಇಂದು, ರಾಜ್ಯಪಾಲ ವಜೂಬಾಯಿ ವಾಲಾ ಅವರಿಗೆ ಪಟ್ಟಿಯನ್ನು ಕಳುಹಿಸಿದ್ದರು. ಬಿ.ಎಸ್.ವೈ ಕಳುಹಿಸಿದ ಸಚಿವರ ಪಟ್ಟಿಗೆ ಅವರು ಅಂಕಿತ ಹಾಕಿದ್ದಾರೆ.
17 ಶಾಸಕರ ಪೈಕಿ ಯಾರಿಗೆ ಯಾವ ಖಾತೆ?
- ಗೋವಿಂದ ಕಾರಜೋಳ -ಲೋಕೋಪಯೋಗಿ ಇಲಾಖೆ
- ಡಾ. ಅಶ್ವತ್ಥ್ ನಾರಾಯಣ ಸಿ.ಎನ್ – ಐಟಿ-ಬಿಟಿ, ವೈದ್ಯಕೀಯ ಶಿಕ್ಷಣ
- ಕೆ.ಎಸ್.ಈಶ್ವರಪ್ಪ – ಸಮಾಜ ಕಲ್ಯಾಣ
- ಆರ್.ಅಶೋಕ – ಕಂದಾಯ
- ಜಗದೀಶ್ ಶೆಟ್ಟರ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ
- ಬಿ.ಶ್ರೀರಾಮುಲು – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಎಸ್.ಸುರೇಶ ಕುಮಾರ್ – ಉನ್ನತ ಶಿಕ್ಷಣ
- ವಿ.ಸೋಮಣ್ಣ – ವಸತಿ ಮತ್ತು ನಗರಾಭಿವೃದ್ಧಿ
- ಕೋಟ ಶ್ರೀನಿವಾಸ್ ಪೂಜಾರಿ – ಮೀನುಗಾರಿಕೆ, ಬಂದರು
- ಜೆ.ಸಿ. ಮಾಧುಸ್ವಾಮಿ – ಕಾನೂನು ಮತ್ತು ಸಂಸದೀಯ ವ್ಯವಹಾರ
- ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ್ – ಗಣಿ ಮತ್ತು ಭೂ ವಿಜ್ಞಾನ
- ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
- ಎಚ್.ನಾಗೇಶ್ – ತೋಟಗಾರಿಕೆ
ಉಳಿದ ಪ್ರಮುಖ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243