ರಾಜಕೀಯ

ಇಂದು ವಿಶ್ವಾಸ ಮತ ಯಾಚನೆಗೆ ಸ್ಪೀಕರ್ ಗಡುವು

Published

on

ಸುದ್ದಿದಿನ, ಬೆಂಗಳೂರು : ಇಂದು ಸಂಜೆ 6 ಗಂಟೆಯೊಳಗೆ ಮೈತ್ರಿ ಸರ್ಕಾರ ವಿಶ್ವಾಸ ಮತಯಾಚನೆ ಮಾಡಬೇಕು ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಗಡುವು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಅತೃಪ್ತ ಶಾಸಕರಿಗೆ ತಿಳುವಳಿಕೆ ಇಲ್ಲ, ಜನ ಇವರನ್ನ ಅದೇಗೆ ಆರಿಸಿಕಳಿಸಿದರೋ ಗೊತ್ತಿಲ್ಲ. ರಾಜೀನಾಮೆ ಹೇಗೆ ಕೊಡಬೇಕೆಂಬುದು ಕೂಡ ಈ ಶಾಸಕರಿಗೆ ಗೊತ್ತಿಲ್ಲ. ನಾನು ಏಕೆ ನೋಟಿಸ್ ನೀಡಿದ್ದೇನೆ ಎಂಬ ಅರಿವೂ ಕೂಡ ಇವರಿಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಹಾಗೆ ಇಂದು 6 ಗಂಟೆಯೊಳಗೆ ಮೈತ್ರಿ ಸರ್ಕಾರ ವಿಶ್ವಾಸ ಮತ ಸಾಬೀತು ಪಡಿಸಬೇಕು. 6 ಗಂಟೆಯ ನಂತರ ಕಲಾಪವನ್ನು ನಡೆಸಲಾಗುವುದಿ್ಲ್ಲಲ್ಲ ಎಂದು ಖಡಕ್ ಆಗಿ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version