ರಾಜಕೀಯ
ಇದು ರಾಜ್ಯ ರಾಜಕಾರಣದ ಸ್ಫೋಟಕ ಸ್ಟೋರಿ ; ಜಾರಕಿಹೊಳಿ ಬ್ರದರ್ಸ್ 6 ಬೇಡಿಕೆ ಸಿಎಂ ಅಸ್ತು : ಬಿಜೆಪಿ ಕನಸು ಭಗ್ನ
ಸುದ್ದಿದಿನ ಡೆಸ್ಕ್ : ಜಾರಕಿಹೊಳಿ ಬ್ರದರ್ಸ್ -ಸಿಎಂ ಹೆಚ್ಡಿಕೆ ನಡುವೆ ನಡೆದ ಮಾತುಕತೆ ಏನು? ಜಾರಕಿಹೊಳಿ ಬ್ರದರ್ಸ್ ಕೇಳಿದ್ದೇನು? ಸಿಎಂ ಹೆಚ್ಡಿಕೆ ಹೇಳಿದ್ದೇನು? ಆ ಒಂದು ಗಂಟೆಯ ಮಾತುಕತೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು..? ಬಿಟಿವಿಯಲ್ಲಿ ಜಾರಕಿಹೊಳಿ ಬ್ರದರ್ಸ್-ಸಿಎಂ ಭೇಟಿಯ ಎಕ್ಸ್ಕ್ಲೂಸಿವ್ ಡೀಟೇಲ್ಸ್-
ಆ ಒಂದು ಗಂಟೆಯಲ್ಲಿ ಆಗಿದ್ದೇನು..?
ಇದು ರಾಜ್ಯ ರಾಜಕಾರಣದ ಸ್ಫೋಟಕ ಸ್ಟೋರಿ-
ಬಂಡಾಯ ಶಮನಕ್ಕೆ ಎಂಟ್ರಿಯಾದ ಸಿಎಂ ಹೆಚ್ಡಿ ಕುಮಾರಸ್ವಾಮಿ ಜಾರಕಿಹೊಳಿ ಬ್ರದರ್ಸ್ ಜತೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ತಾಜ್ವೆಸ್ಟೆಂಡ್ನಲ್ಲಿ ಒಂದು ಗಂಟೆ ಕಾಲ ನಡೆದ ಮಾತುಕತೆ ಫಲಪ್ರದವಾಗಿದ್ದು, ಸಿಎಂ ಭೇಟಿ ವೇಳೆ ರಮೇಶ್ ಜಾರಕಿಹೊಳಿ,ಸತೀಶ್ ಜಾರಕಿಹೊಳಿ, ನಾಗೇಂದ್ರ ಮತ್ತು ಹೆಚ್ಡಿ ರೇವಣ್ಣ ಹಾಜರಿದ್ದರು. ನಾವು ರಾಹುಲ್ ಗಾಂಧಿ ಬಳಿಗೆ ಹೋಗಲ್ಲ ನೀವೇ ಬಗೆಹರಿಸಿ ಎಂದರು ಜಾರಕಿಹೊಳಿ. ಜಾರಕಿಹೊಳಿಯ 6 ಪ್ರಮುಖ ಬೇಡಿಕೆಗಳಿಗೂ ಒಪ್ಪಿಗೆ ನೀಡಿದ ಸಿಎಂ ಕುಮಾರಸ್ವಾಮಿ ಅವರು ಸತೀಶ್ ಜಾರಕಿಹೊಳಿ ಹಾಗೂ ನಾಗೇಂದ್ರಗೆ ಸಚಿವ ಪಟ್ಟ ನೀಡಲು ಸಿಎಂ ಒಪ್ಪಿಗೆ ನೀಡಿದ್ದು, ರಮೇಶ್ ಜಾರಕಿಹೊಳಿಯ ಖಾತೆ ಬದಲಾವಣೆಗೆ ಓಕೆ ಎಂದಿದ್ದಾರೆ. ಬೆಳಗಾವಿ ಜಿಲ್ಲೆ ಸದ್ಯಕ್ಕೆ ವಿಭಜನೆ ಇಲ್ಲ, ಬೆಳಗಾವಿ ರಾಜಕಾರಣದಲ್ಲಿ ಯಾರ ಹಸ್ತಕ್ಷೇಪವೂ ಇರಲ್ಲ ಎಂದು ಎಲ್ಲಾ ಬೇಡಿಕೆಗಳಿಗೂ ಸಮ್ಮತಿ ನೀಡಿದ್ದಾರೆ ಸಿಎಂ ಕುಮಾರಸ್ವಾಮಿ.
ಜಾರಕಿಹೊಳಿ ಬ್ರದರ್ಸ್ 6 ಬೇಡಿಕೆ ಸಿಎಂ ಅಸ್ತು
ಬಿಜೆಪಿ ನಾಯಕರ ಆಪರೇಷನ್ ಕಮಲ ಠುಸ್ ಆಗಿದೆ. ಸಿಎಂ ಜತೆ ಜಾರಕಿಹೊಳಿ ಬ್ರದರ್ಸ್ ಮಾತುಕತೆ ಯಶಸ್ವಿಯದನಂತರ, ಜಾರಕಿಹೊಳಿ ಸಹೋದರರ ಎಲ್ಲಾ ಬೇಡಿಕೆಗಳಿಗೂ ಸಮ್ಮತಿಸಿದ್ದಾರೆ ಸಿಎಂ ಹೆಚ್ಡಿಕೆ.
ಬಿಜೆಪಿ ನಾಯಕರ ಎಲ್ಲಾ ಪ್ಲಾನ್ಗಳನ್ನು ಉಲ್ಟಾ ಮಾಡಿದ ಸಿಎಂ ಕುಮಾರಸ್ವಾಮಿ.
ತಾಜ್ವೆಸ್ಟೆಂಡ್ನಲ್ಲಿ ರಮೇಶ್ ಜಾರಕಿಹೊಳಿ ಭೇಟಿಗೆ ಸಜ್ಜಾಗಿದ್ದ ಬಿಜೆಪಿ ನಾಯಕರು
ಆಪರೇಷನ್ ಕಮಲಕ್ಕೆ ಅಂತಿಮ ತಯಾರಿ ಮಾಡಿಕೊಂಡಿದ್ದರು. ರಾಜನಾಥ್ ಸಿಂಗ್ ಬೆಂಗಳೂರಿಗೆ ಎಂಟ್ರಿ ಕೊಡ್ತಿದ್ದಂತೆ ಮಾತುಕತೆಗೆ ಸಿದ್ದವಾಗಿತ್ತು ವೇದಿಕೆ. ಅಷ್ಟರಲ್ಲೇ ತಾಜ್ ವೆಸ್ಟ್ ಎಂಡ್ಗೆ ಎಂಟ್ರಿ ಕೊಟ್ಟು ಬಿಜೆಪಿ ಕನಸು ಭಗ್ನ ಮಾಡಿದ ಸಿಎಂ. ಯಾವುದೇ ಕಾರಣಕ್ಕೂ ನಾವು ಬಿಜೆಪಿ ಜತೆ ಹೋಗಲ್ಲ ಎಂದರು ಜಾರಕಿಹೊಳಿ ಬ್ರದರ್ಸ್.
ಬಿಜೆಪಿ ಪ್ಲಾನ್ ಛಿದ್ರ ಮಾಡಿದ ಹೆಚ್ಡಿಕೆ
ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್
ಮುಂದುವರೆಯುತ್ತಲೇ ಇದೆ ಜಾರಕಿಹೊಳಿ ಬ್ರದರ್ಸ್-ಸಿಎಂ ಮಾತುಕತೆ. ತಾಜ್ ವೆಸ್ಟ್ಎಂಡ್ನಲ್ಲಿ ನಡೆಯುತ್ತಿರುವ ಸುದೀರ್ಘ ಮಾತುಕತೆ-
ಜಾರಕಿಹೊಳಿ ಬ್ರದರ್ಸ್ ಗೆ ಕೊನೆಗುಯ ಸಮಾಧಾನ ಪಡಿಸಿದ್ಸಾರೆ ಸಿಎಂ ಹೆಚ್ಡಿಕೆ.
ಇಂದು ಮಧ್ಯಾಹ್ನ ಜಾರಕಿಹೊಳಿ ಸೋದರರ ಭೇಟಿಯಾಗಲಿರುವ ಸಿದ್ದರಾಮಯ್ಯನವರು,
ಜಾರಕಿಹೊಳಿ ಭೇಟಿ ನಂತರ ಸಂಜೆ ದೆಹಲಿಗೆ ತೆರಳಲಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಲಿರುವ ಸಿದ್ದು. ಈಗಾಗಲೇ ದೆಹಲಿಯತ್ತ ಹೊರಟಿದ್ದಾರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್. ಸಿಎಂ ಜತೆಗಿನ ಮಾತುಕತೆ ಫಲಪ್ರದ ಹಿನ್ನೆಲೆಯಲ್ಲಿ ಜಾರಕಿಹೊಳಿ ಬ್ರದರ್ಸ್ ದೆಹಲಿ ಪ್ರಯಾಣ ರದ್ದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401