ರಾಜಕೀಯ

‘ದೋಸ್ತಿ ಸರ್ಕಾರದಲ್ಲಿ ಏನೂ ತೊಂದ್ರೆ ಇಲ್ಲ’ : ಹೆಚ್.ಎಂ. ರೇವಣ್ಣ

Published

on

ಸುದ್ದಿದಿನ,ನೆಲಮಂಗಲ: ದೋಸ್ತಿ ಸರ್ಕಾರದಲ್ಲಿ ಏನೂ ತೊಂದರೆ ಇಲ್ಲ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ನೆಲಮಂಗಲ ಸಮೀಪದ ವೀರಾಪುರದಲ್ಲಿ ಎಂ.ಎಲ್.ಸಿ ಹೆಚ್.ಎಂ ರೇವಣ್ಣ ತಿಳಿಸಿದರು.

ಬಿಬಿಎಂಪಿಯಲ್ಲಿ ಆಪರೇಷನ್ ಕಮಲದ ವಿಚಾರವಾಗಿ ಮಾತನಾಡಿದ ಅವರು, ಆಪರೇಷನ್ ಕಮಲವನ್ನ ಪ್ರಾರಂಭಿಸಿರುವುದೆ ಬಿಜೆಪಿಯವರು. ನೆನ್ನೆ ನೆಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ದೋಸ್ತಿ ಸರ್ಕಾರ ಜಯಗಳಿಸಿದೆ. ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿಯಲ್ಲ.ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಲಿದೆ. ನನಗೆ ಚನ್ನಪಟ್ಟಣ ಬೇಕಿರಲಿಲ್ಲ, ನನ್ನನು ಅಲ್ಲಿಗೆ ಕಳುಹಿಸಿದ್ರು, ನಾನು ಮುಖಂಡನಲ್ಲ, ಪಕ್ಷದ ನಿಷ್ಟಾವಂತ ಕಾರ್ಯಕರ್ತ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version