ರಾಜಕೀಯ

ಪರಮೇಶ್ವರ್ ಗೆ ಮುಖ್ಯಮಂತ್ರಿಯಾಗುವ ಸಾಮರ್ಥ್ಯವಿದೆ : ಸಂಸದ ವಿ.ಎಸ್.ಉಗ್ರಪ್ಪ

Published

on

ಸುದ್ದಿದಿನ, ತುಮಕೂರು : ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಡಾ ಜಿ ಪರಮೇಶ್ವರ್ ಗೆ ಸಿ ಎಂ ಸ್ಥಾನ ಲಭ್ಯವಾಗುತ್ತಾ ಎಂಬ ವಿಚಾರವಾಗಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ ಬಳ್ಳಾರಿ ಸಂಸದ ವಿ ಎಸ್ ಉಗ್ರಪ್ಪ.

ಪರಮೇಶ್ವರ್ ರವರಿಗೆ ಮುಖ್ಯಮಂತ್ರಿ ಯಾಗುವ ಎಲ್ಲಾ ವಿದ್ಯಾರ್ಹತೆ, ಸಾಮರ್ಥ್ಯ ವಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಪಾರ್ಟಿ ಮತ್ತು ಶಾಸಕರು ಅದರಲ್ಲೂ ಸಮ್ಮಿಶ್ರ ಆಗುವಂತ ಸಂದರ್ಭದಲ್ಲಿ ಖಂಡಿತಾ ಅವಕಾಶವಿದೆ. ಅವರು ಮುಖ್ಯಮಂತ್ರಿ ಯಾದ್ರೆ ಖುಷಿಪಡೊದ್ರಲ್ಲಿ ನಾನು ಮೊದಲಿಗನಾಗುತ್ತೆನೆ. ಯಾಕಂದ್ರೆ ತುಮಕೂರು‌ ಜಿಲ್ಲೆಗೆ ಮುಖ್ಯ ಮಂತ್ರಿ ಸ್ಥಾನ ಲಭ್ಯನೇ ಆಗಿಲ್ಲ‌ ಎಂದಿದ್ದಾರೆ.

ಪರಮೇಶ್ವರ್ ಅವರ ಮೂಲಕ ಲಭ್ಯವಾಗುತ್ತೆ ಅಂದ್ರೆ ನಾವೆಲ್ಲರೂ ಖುಷಿ ಪಡೊ ಅಂತಾ ವಿಚಾರ. ಏಕಂದ್ರೆ ಪರಮೇಶ್ವರ್ ಅವರಿಗೆ ಅರ್ಹತೆ ಇದೆ, ಸೀನಿಯರ್ ಇದ್ದಾರೆ, ಪಕ್ಷದ ಅಧ್ಯಕ್ಷರಾಗಿದ್ದಾರೆ. ಆ ತರಹ ಅರ್ಹತೆ ಇರೋರು ಅನೇಕ ಜನರು ನಮ್ಮ ಪಕ್ಷದಲ್ಲಿದ್ದಾರೆ. ಮುಖ್ಯಮಂತ್ರಿ ಯಾಗುವಂತ ಅರ್ಹತೆ ಇರೊರು ಮಲ್ಲಿಕಾರ್ಜುನ್ ಖರ್ಗೆ ಸಾಹೆಬ್ರು ಇದ್ದಾರೆ. ಎರಡನೇ ಭಾರಿಗೆ ಸಿದ್ದರಾಮಯ್ಯನವರು ಆಗೊ ಅಂತಾ ಅವಕಾಶಗಳಿದ್ದಾವೆ. ಡಿಕೆ ಶಿವಕುಮಾರ್,ಆರ್ ವಿ ದೇಶಪಾಂಡೆ, ಹೆಚ್ ಕೆ ಪಾಟೀಲ್ ಈಗೆ ಅನೇಕ ಜನ ಅರ್ಹತೆ ಇರತಕ್ಕಂತಹವರು ಇದ್ದಾರೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಮತ್ತು ಶಾಸಕರು ತೀರ್ಮಾನ ಮಾಡುತ್ತಾರೆ‌ ಎಂದು ತುಮಕೂರಿನ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986175401

Trending

Exit mobile version