ದಿನದ ಸುದ್ದಿ
ಆಪರೇಷನ್ ಕೆಳಗೆ ಮಾಡಿದ್ದಾರೋ ಮೇಲೆ ಮಾಡಿದ್ದಾರೋ ನನಗೆ ಗೊತ್ತಿಲ್ಲ : ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯ
ಸುದ್ದಿದಿನ,ಕೋಲಾರ : ಆಪರೇಷನ್ ಕೆಳಗೆ ಮಾಡಿದ್ದಾರೋ ಮೇಲೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಹಾಗೇ ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳ ಕುರಿತು ನನಗೇನು ಗೊತ್ತಿಲ್ಲ. ಎರಡು ದಿನದಿಂದ ನನ್ನ ಕ್ಷೇತ್ರದ ಜನರನ್ನ ಮಾತನಾಡಸಿಕೊಂಡು, ಅವರ ಜೊತೆ ಕಾಲ ಕಳೆದು ಬಂದಿದ್ದೇನೆ. ಯಾವ ಆಪರೇಷನ್ ಕಮಲನೂ ಗೊತ್ತಿಲ್ಲ, ಸಂಪಿಗೆನು ಗೊತ್ತಿಲ್ಲ ಎಂದು ಕೋಲಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದರು.
ಅದೇನು ಆಪರೇಷನ್ನೊ, ಅಧೇನು ಕಾಯಿಲೇನೋ, ಅದೇನು ವಾಸಿಯಾಗಿದ್ಯೋ ಇಲ್ವೊ ನನಗೇನು ಗೊತ್ತಿಲ್ಲ. ನನಗೆ ಯಾರು ಸಂಪರ್ಕ ಮಾಡಿಲ್ಲ, ಯಾವ ಶಾಸಕ ಮುಂಬೈ, ಶ್ರೀಲಂಕದಲ್ಲಿದ್ದಾರೋ ಅದೂ ಗೊತ್ತಿಲ್ಲ. ನಾನು ಯಾರಿಗೂ ದೊಡ್ಡವನಲ್ಲ ಸಭಾಪತಿ ಸ್ಥಾನ ದೊಡ್ಡದು, ಆ ಸ್ಥಾನದ ಗೌರವವನ್ನ ಕಾಪಾಡುತ್ತೇನೆ. ಅಂಕಿ ಅಂಶಗಳ ಆಧಾರದ ಮೇಲೆ ಶಾಸಕರ ಆಧಾರದ ಮೇಲೆ ನಾನು ಮಾತನಾಡುತ್ತೇನೆ .ಹೀಗಾಗಿ ಸರ್ಕಾರ ಭದ್ರವಾಗಿದೆ ಎಂದು ವಿಶ್ವಾಸದ ನುಡಿಗಳನ್ನಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401