ರಾಜಕೀಯ

ಕುಮಾರ ಗರ್ವಪರ್ವ ಸಮಾಪ್ತಿಯಾಗುತಿದೆ

Published

on

ಮಂಡ್ಯ ದಳಪತಿ ಕುಮಾರನ ಗರ್ವಪರ್ವ ಇನ್ಮೇನು ಅಂತ್ಯ ಕಾಣ್ತಾ ಬರ್ತಿದೆ. ಇನ್ಮೇಲೆ ಉತ್ತರಕುಮಾರನ ಪೌರುಷ ಅವರೂರ ಅಕ್ಕಪಕ್ಕದ ಮಂದಿ ಮುಂದೆ ಅಷ್ಟೆ.

ಪಾಪ ಆ ಕಾಂಗೈಗರದೋ ತ್ರಿಶಂಕು ಸ್ಥಿತಿ. ಆಚೀಚೆ ಕಡೆಯಿಂದ ವಲಸೆ ಬಂದ ಅನೇಕ ಹೊಲಸಿಗರೆಲ್ಲಾ ಸೇರಿ ಕೊಳಚೆ ಗುಂಡಿ ಮಾಡಿ ಬಿಟ್ಟರು. ಕೈ ಪಕ್ಷ ಕಟ್ಟಿದ ಅತ್ಯಂತ ನಿಷ್ವಾವಂತ ಹಿರಿಯರನ್ನೆಲ್ಲಾ ಮೂಲೆಗೆ ಕೂರಿಸುವ ಕೆಲಸ ಮಾಡಿ ಮುಗಿಸಿದ್ದಾರೆ. ಅಧ್ಯಕ್ಷ ಆಗಲಿಕ್ಕೆ ನಾನೊಲ್ಲೆ ನಾನೊಲ್ಲೆ ಅಂತ ಕೊಟ್ಟ ಕುರೆಯನೇರಲಾರದೆ ಕೈಕೊಟ್ಟು ಅತ್ತಿಂದಿತ್ತ ಓಟ ಕೀಳ್ತಿದಾರೆ.

ಇವತ್ತು ರಾತ್ರಿನೊ, ನಾಳೆ ಬೆಳಗ್ಗೆನೊ ಜೆಪಿಯವರ ಅಜ್ಞಾತವಾಸ ಮುಗಿಯುವ ಲಕ್ಷಣಗಳು ಕಾಣಿಸುತ್ತಿವೆ. ಅವರಾಗಲೆ ಕೇಸರಿ ಬಾವುಟ ಬಿದಿರು ಗಳಕ್ಕೇರಿಸಿಕೊಂಡು ವಿಜಯೋತ್ಸವ ಆಚರಿಸಲು ಅಣಿ ಮಾಡಿಕೊತಿದ್ದಾರೆ.‌ಇನ್ಮೇಲಾದ್ರೂ ಮೋದಿ ಪಡೆಯ ಈ ಬಿಜಿಯಪ್ಪಗಳು ಒಂದೈದು ವರ್ಷನದ್ರೂ ಹಗರಣಗಳ ಖೆಡ್ಡಕೆ ಸಿಲುಕಿ ಹೈರಾಣಾಗದಿದ್ದರೆ ಒಳ್ಳೆಯದು.

ಕನ್ನಡನಾಡ ಜನ ಸೋತು ಹೋಗಿದ್ದಾರೆ ಕಣ್ರಪ್ಪಾ ಖಾದಿ ಅಣ್ಣೈಗಳಾ; ನಿಮ್ಗೆಲ್ಲಾ ಓಟು ಹಾಕಿಹಾಕಿ ಅಧಿಕಾರ ಮಾಡಲಿಕ್ಕೆ ಮೇಲಕ್ಕೆ ನೂಕಿನೂಕಿ. ನಿಮ್ಮೆಲ್ಲರ ಲಜ್ಜೆಗೇಡುತನ ನೋಡ್ನೋಡಿ ಸುಸ್ತು ಆಗಿದಾರೆ ಕಣ್ರೊ ಅಣ್ಣಂದಿರಾ.

ಹೆಂಗೂ ಮೇಲೆ ಕೇಂದ್ರದಲ್ಲಿ ಕಮಲ ಬಂದು ಭದ್ರವಾಗಿ ಕೂತಿದೆ. ಇಲ್ಲೂ ಅದೇ ಅರಳಲಿ ಬಿಡ್ರೆಪಾ. ಹಿಂದಿನಿಂದಲೂ ಅಲ್ಲಿ ಅದಿದ್ದರೆ, ಇಲ್ಲಿ ಇನ್ನೊಂದು ಪಕ್ಷ ಅಧಿಕಾಕ್ಕೆ ಬಂದೂಬಂದೂ ಸರಿಯಾದ ಏಳ್ಗೆಯಾಗ್ತಿಲ್ಲ ನಮ್ಮ ಈ ಕನ್ನಡನಾಡು !

ಜನಕ್ಕೆ ಏನಾದ್ರೂ ಒಳ್ಳೇದ ಮಾಡಿ ಸಾಯ್ರಿ. ನಮ್ಮ ಕನ್ನಡ ಜನಗಳ್ನ ಸಾಯಿಸಬೇಡ್ರಿ ಕಣ್ರೋ ಖಾದೆಪ್ಪಗಳಾ ! ನಿಮ್ಮೀ ದಡ್ಡಾಟ ನೋಡೇ ಆ ಮೋಡ ಮಳೆ ಸುರಿಸ್ತಿಲ್ಲ ಅನ್ನಿಸುತ್ತದೆ ನೋಡಿ.

ಶಿವಕುಮಾರಸ್ವಾಮಿ ಕುರ್ಕಿ
ದಾವಣಗೆರೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version